ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಟ್ಟಿನ ಸಮಯದಲ್ಲಿ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ 4 ದಿನ ರಜೆ- ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ

ನವದೆಹಲಿ: ಮುಟ್ಟಿನ ಸಮಯದಲ್ಲಿ ಎಲ್ಲಾ ವರ್ಗದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ ನಾಲ್ಕು ವೇತನ ಸಹಿತ ದಿನ ರಜೆ ನೀಡುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಕೈಗೆತ್ತಿಕೊಂಡಿದೆ.

ಹೌದು. ದೆಹಲಿ ಲೇಬರ್ ಯೂನಿಯನ್ ಸಲ್ಲಿಸಿದ ಅರ್ಜಿಯಲ್ಲಿ, 'ಋತುಸ್ರಾವವು ಮಾನವನ ಘನತೆಗೆ ಅಂತರ್ಗತವಾಗಿ ಸಂಬಂಧಿಸಿದೆ. ಮುಟ್ಟಿನ ಸಮಯದಲ್ಲಿ ಮಹಿಳೆಗೆ ವಿಶ್ರಾಂತಿ ಸೌಲಭ್ಯಗಳು, ಪ್ರತ್ಯೇಕ ಮತ್ತು ಸ್ವಚ್ಛ ಶೌಚಾಲಯಗಳು, ಕರವಸ್ತ್ರಗಳನ್ನು ಒದಗಿಸಬೇಕು' ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಈ ಹಿಂದೆಯೇ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರ ಅಧ್ಯಕ್ಷತೆಯಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ಇರಿಸಲಾಗಿತ್ತು. ಆದರೆ ನ್ಯಾಯಪೀಠವು ಸಭೆ ಸೇರದ ಕಾರಣ ಈ ಅರ್ಜಿಯನ್ನು ಆಲಿಸಲಾಗಲಿಲ್ಲ. ಹೀಗಾಗಿ ನವೆಂಬರ್ 23ರಂದು ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ.

Edited By : Vijay Kumar
PublicNext

PublicNext

20/10/2020 03:20 pm

Cinque Terre

105.26 K

Cinque Terre

21

ಸಂಬಂಧಿತ ಸುದ್ದಿ