ಪೋನ್ಗ್ ಯಾಂಗ್ : ಉತ್ತರ ಕೊರಿಯಾದಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾದ ಬೆನ್ನಲ್ಲೇ 1 ಲಕ್ಷದ 74 ಸಾವಿರದ 440 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ. ಅಲ್ಲದೆ ಒಂದೇ ದಿನ 27 ಮಂದಿ ಮೃತಪಟ್ಟಿದ್ದಾರೆ. ಇನ್ನು ಮೃತಪಟ್ಟವರೆಲ್ಲ ಕೊರೊನಾದಿಂದಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿಲ್ಲ. ಮೇ ತಿಂಗಳಲ್ಲಿ ಇದುವರೆಗೆ 5,24,440 ಮಂದಿಗೆ ಜ್ವರ ಬಂದಿದೆ. ಇದರಲ್ಲಿ 2,43,630 ಮಂದಿ ಚೇತರಿಸಿಕೊಂಡಿದ್ದಾರೆ. ಇದು ಕೂಡ ಕೊರೊನಾದಿಂದ ಜ್ವರ ಬಂದಿದೆಯಾ ಇಲ್ಲವೋ ಎಂಬುದು ಖಚಿತವಾಗಿಲ್ಲ.
ಇದೇ ತಿಂಗಳ 13 ರಂದು ದೇಶದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬೆನ್ನಲ್ಲೇ ಅಲ್ಲಿ ರಾಷ್ಡ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಈ ಸಂಬಂಧ ಅಲ್ಲಿನ ತಜ್ಞರು, ದೇಶದ 2.5 ಕೋಟಿ ಜನರು ಲಸಿಕೆ ಪಡೆಯದೇ ಇರುವ ಕಾರಣ ಕೋವಿಡ್ ಪ್ರಕರಣ ಎದುರಿಸಲು ಕಷ್ಟವಾಗಬಹುದು ಎಂದು ತಿಳಿಸಿದ್ದಾರೆ.
PublicNext
14/05/2022 09:56 am