ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಜೀವಿನಿ ಹೊತ್ತು ತರುವ ಹನುಮಂತನಿಗೆ ಹೋಲಿಸಿ ಭಾರತಕ್ಕೆ ಧನ್ಯವಾದ ಹೇಳಿದ ಬ್ರೆಜಿಲ್ ಅಧ್ಯಕ್ಷ : ನೆಟ್ಟಿಗರನ್ನು ಪುಳಕಿತಗೊಳಿಸಿದ ಟ್ವೀಟ್!

ಬ್ರೆಜಿಲ್: ಕೊರೊನಾಗೆ ಮದ್ದು ಲಸಿಕೆಗಳನ್ನು ಪೂರೈಸಿದ್ದಕ್ಕಾಗಿ ಭಾರತಕ್ಕೆ ವಿಭಿನ್ನವಾಗಿ ಧನ್ಯವಾದ ಹೇಳಿದ ಬ್ರೆಜಿಲ್ ಅಧ್ಯಕ್ಷ.

ಹೌದು ''ರಾಮಾಯಣದಲ್ಲಿ ಸಂಜೀವಿನಿ ಪರ್ವತ ಹೊತ್ತು ತಂದು ಲಕ್ಷ್ಮಣನಿಗೆ ಜೀವದಾನ ನೀಡಿದ ಹನುಮಂತನಂತೆ ಕೊರೊನಾ ನಿರೋಧಕ ಲಸಿಕೆಗಳನ್ನು ಭಾರತದಿಂದ ಬ್ರೆಜಿಲ್ ಗೆ ಕಳುಹಿಸಿಕೊಟ್ಟು ನಮ್ಮ ಪ್ರಜೆಗಳ ಜೀವ ಉಳಿಸಲಾಗಿದೆ,'' ಎಂದು ಅವರು ಫೋಟೊವೊಂದನ್ನು ಟ್ವೀಟ್ ಮಾಡುವ ಮೂಲಕ ಬ್ರೆಜಿಲ್ ಅಧ್ಯಕ್ಷ ಜೇರ್ ಬೊಲ್ಸೊನಾರೊ ಅವರು ಭಾರತಕ್ಕೆ ವಿಶಿಷ್ಟವಾಗಿ ಧನ್ಯವಾದ ಅರ್ಪಿಸಿದ್ದಾರೆ.

ಫೋಟೊದಲ್ಲಿ ಸಂಜೀವಿನಿ ಪರ್ವತ ಹೊತ್ತ ಹನುಮಂತ ಭಾರತದಿಂದ ಬ್ರೆಜಿಲ್ ಗೆ ಜಿಗಿಯುತ್ತಿದ್ದಾನೆ. ವಿಶ್ವದ ಭೂಪಟ ಹಿನ್ನೆಲೆಯಲ್ಲಿದೆ. ಪರ್ವತ ಮೇಲೆ ಲಸಿಕೆಯನ್ನು ಹೋಲುವ ಸಿರಿಂಜ್ ಮತ್ತು ಔಷಧ ಬಾಟಲಿಯ ಸಣ್ಣ ಚಿಹ್ನೆಗಳಿವೆ. 'ಧನ್ಯವಾದಗಳು ಭಾರತ' ಎಂದು ಫೋಟೊದ ತುದಿಯಲ್ಲಿ ಬರೆಯಲಾಗಿದೆ.

''ನಮಸ್ಕಾರ ಪ್ರಧಾನಿ ನರೇಂದ್ರ ಮೋದಿ ಅವರೇ, ಜಂಟಿ ಸಹಯೋಗದ ಮೂಲಕ ಜಾಗತಿಕ ಸವಾಲುಗಳನ್ನು ಮೆಟ್ಟಿ ನಿಲ್ಲಲು ಭಾರತದಂತಹ ಸ್ನೇಹಿತ ನಮ್ಮೊಂದಿಗೆ ಇರುವುದು ಹೆಮ್ಮೆ ಮೂಡಿಸುತ್ತಿದೆ. ಲಸಿಕೆಗಳನ್ನು ರಫ್ತು ಮಾಡಿ ನೆರವಾಗಿದ್ದಕ್ಕೆ ಬ್ರೆಜಿಲ್ ಪರವಾಗಿ ಧನ್ಯವಾದ,'' ಎಂದು ಟ್ವೀಟ್ನಲ್ಲಿ ಬೊಲ್ಸೊನಾರೊ ಬರೆದಿದ್ದಾರೆ.

ಭಾರತದ ಭಾಷೆಯನ್ನೇ ಅಂದರೆ ನಮಸ್ಕಾರ, ಧನ್ಯವಾದ ಪದ ಬಳಕೆಯ ಜೊತೆಗೆ ಹನುಮಂತನ ಸಂಜೀವಿನಿಯ ಚಿತ್ರ ನೆಟ್ಟಿಗರನ್ನು ಪುಳಕಿತರಂತೆ ಮಾಡಿದೆ. ಇದಕ್ಕೆ ಭಾರತದ ಅನೇಕರು ಪ್ರತಿಕ್ರಿಯಿಸಿದ್ದಾರೆ.

Edited By : Nirmala Aralikatti
PublicNext

PublicNext

23/01/2021 08:01 am

Cinque Terre

121.23 K

Cinque Terre

31

ಸಂಬಂಧಿತ ಸುದ್ದಿ