ಬೀಜಿಂಗ್: ಮಹಾಮಾರಿ ಕೊರೊನಾ ವೈರಸ್ ಮತ್ತೊಮ್ಮೆ ಚೀನಾ ಜನರ ಜನ್ಮ ಜಾಲಾಡುತ್ತಿದೆ. ಈ ನಡುವೆ ಕೊರೊನಾ ಪತ್ತೆಗಾಗಿ ಪರೀಕ್ಷೆ ಮಾಡಿಸಿಕೊಳ್ಳೋದಿಕ್ಕೆ ಹಿಂಜರಿಯುತ್ತಿರುವ ಜನರ ಮೇಲೆ ಅಲ್ಲಿನ ಆರೋಗ್ಯ ಸಿಬ್ಬಂದಿ ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾರೆ.
ಅದರ ಕೆಲವು ವಿಡಿಯೋಗಳು ವೈರಲ್ ಆಗುತ್ತಿವೆ. ಅದರಲ್ಲಿ ಒಂದು ವಿಡಿಯೋ ಹೆಚ್ಚು ಗಮನ ಸೆಳೆಯುತ್ತಿದೆ. ಮಹಿಳೆಯನ್ನು ನೆಲಕ್ಕೆ ಕೆಡವಿದ ಆರೋಗ್ಯ ಸಿಬ್ಬಂದಿಯೊಬ್ಬ ಆಕೆಯ ಹೊಟ್ಟೆ ಮೇಲೆ ಕುಳಿತು ಸ್ವ್ಯಾಬ್ ಪರೀಕ್ಷೆ ನಡೆಸಿದ್ದಾನೆ. ಇದಕ್ಕೆ ಇನ್ನೋರ್ವ ಸಿಬ್ಬಂದಿ ಸಹಕರಿಸಿದ್ದಾನೆ. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಚೀನಾದಲ್ಲಿ ಕೊರೊನಾ ವೈರಸ್ ಮತ್ತೊಮ್ಮೆ ತಾರಕಕ್ಕೇರಿದ್ದು ಅಲ್ಲಿನ ಸರ್ಕಾರ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ. ಹೀಗಾಗಿ ವೈದ್ಯಕೀಯ ಸಿಬ್ಬಂದಿ ಕಟ್ಟುನಿಟ್ಟಾಗಿ ಜನರನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ.
PublicNext
05/05/2022 05:18 pm