ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವದಲ್ಲಿ ಹೆಚ್ಚಿದ ಆತಂಕ- 7 ದಿನಗಳಲ್ಲಿ 20 ಲಕ್ಷ ಮಂದಿಗೆ ಕೊರೊನಾ

ಸ್ವಿಜರ್ಲೆಂಡ್​: ಡೆಡ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಸಿಗದೇ ಏರಿಕೆಯಾಗುತ್ತಲೇ ಇದೆ. ಪರಿಣಾಮ ವಿಶ್ವದಲ್ಲಿ ಕಳೆದ ಏಳು ದಿನಗಳಲ್ಲಿ ಒಟ್ಟು 20 ಲಕ್ಷ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ.

ಕಳೆದೊಂದು ವಾರದಲ್ಲಿ ಜಗತ್ತಿನಲ್ಲಿ ದಾಖಲೆ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ದಾಖಲಾಗಿವೆ. ಸೆ. 14ರಿಂದ 20ರ ವರೆಗೆ ಸುಮಾರು 20 ಲಕ್ಷ ಮಂದಿಯಲ್ಲಿ ಕೋವಿಡ್ ತಗುಲಿರುವುದು ದೃಢಪಟ್ಟಿದೆ. ಇದುವರೆಗಿನ ಲೆಕ್ಕಾಚಾರದ ಪ್ರಕಾರ ಒಂದು ವಾರದಲ್ಲಿ ಇಷ್ಟೊಂದು ದೊಡ್ಡಮಟ್ಟದಲ್ಲಿ ಸೋಂಕು ಪತ್ತೆಯಾಗಿದ್ದು ಇದೇ ಮೊದಲು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಸಮಾಧಾನದ ಸಂಗತಿ ಎಂದರೆ ಇದೇ ಅವಧಿಯಲ್ಲಿ ಕೊರೊನಾದಿಂದ ಸಾಯುವವರ ಪ್ರಮಾಣ ಶೇ.10 ತಗ್ಗಿದೆ. ಕಳೆದ ಒಂದು ವಾರದಲ್ಲಿ ವಿಶ್ವದಲ್ಲಿ ಕರೊನಾ ಸೋಂಕಿನಿಂದಾಗಿ 36,764 ಮಂದಿ ಮೃತಪಟ್ಟಿದ್ದಾರೆ. ಇತ್ತ ಇದೀಗ ಅತೀ ಹೆಚ್ಚು ಕೋವಿಡ್-19 ಸೋಂಕಿತರ ಗುಣಮುಖ ರಾಷ್ಟ್ರಗಳ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ.

Edited By : Vijay Kumar
PublicNext

PublicNext

22/09/2020 07:08 pm

Cinque Terre

50.41 K

Cinque Terre

0

ಸಂಬಂಧಿತ ಸುದ್ದಿ