ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಮಾನದಲ್ಲಿ ಅಸ್ವಸ್ಥನಾದ ಪ್ರಯಾಣಿಕ: ಚಿಕಿತ್ಸೆ ನೀಡಿದ ಕೇಂದ್ರ ಸಚಿವ

ಮುಂಬೈ: ವಿಮಾನ ಪ್ರಯಾಣದ ವೇಳೆ ಅಸ್ವಸ್ಥನಾಗಿ ಕುಸಿದು ಬಿದ್ದ ಸಹ ಪ್ರಯಾಣಿಕರೊಬ್ಬರಿಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಾಗವತ್ ಕಿಶನ್ ರಾವ್ ಕರಡ್ ಅವರು ವಿಮಾನದಲ್ಲೇ ತುರ್ತು ಚಿಕಿತ್ಸೆ ನೀಡಿದ್ದಾರೆ.

ನಿನ್ನೆ ಸೋಮವಾರ ಕರಡ್ ಅವರು 6ಇ171 ವಿಮಾನದಲ್ಲಿ ಪ್ರಯಾಣಿಸುವಾಗ ಈ ಘಟನೆ ನಡೆದಿದೆ. ಈ ಘಟನೆಯನ್ನು ರಾಜ್ಯಸಭೆ ಸದಸ್ಯ ವಿನಯ್ ಸಹಸ್ತ್ರಬುದ್ಧೆ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಅನ್ನು ರಿಟ್ವೀಟ್ ಮಾಡಿರುವ ಭಾಗವತ್ ಅವರು 'ವಿನಯ್ ಅವರೇ ಧನ್ಯವಾದಗಳು. ನಾನು ಒಬ್ಬ ವೈದ್ಯನಾಗಿ ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಸಹ ಪ್ರಯಾಣಿಕನಿಗೆ ಸಹಾಯ ಮಾಡಿದ್ದು ನನಗೆ ಸಂತೋಷ ತಂದಿದೆ' ಎಂದಿದ್ದಾರೆ.

Edited By : Nagaraj Tulugeri
PublicNext

PublicNext

16/11/2021 10:18 pm

Cinque Terre

42.37 K

Cinque Terre

3