ಬೆಳಗಾವಿ : ಹೆಮ್ಮಾರಿ ಸೋಂಕು ಕೊರೊನಾ ಜೊತೆಗೆ ರೂಪಾಂತರಿ ವೈರಸ್ ಒಮಿಕ್ರಾನ್ ಉಪಟಳ ಹೆಚ್ಚಾದ ಬೆನ್ನಲ್ಲೇ ಬೆಳಗಾವಿಯಲ್ಲಿ ಒಂದು ವಾರದ ಮಟ್ಟಿಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ನಾಳೆಯಿಂದ ಜ.11 ರಿಂದ 18 ಜಿಲ್ಲೆಯಲ್ಲಿ 1 ರಿಂದ 9ನೇ ತರಗತಿಯವರೆಗಿನ ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ ಎಂ.ಜಿ.ಹಿರೇಮಠ ಮಕ್ಕಳಲ್ಲಿ ಕೊರೊನಾ ಸೋಂಕು ಉಲ್ಬಣ ಹಿನ್ನೆಲೆಯಲ್ಲಿ ಈ ಆದೇಶ ಜಾರಿ ಮಾಡಲಾಗಿದೆ ಎಂದು ಹೇಳಿದ್ಧಾರೆ.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಡಿಹೆಚ್ ಒ, ಡಿಡಿಪಿಐ ಜೊತೆ ಸಭೆ ನಡೆಸಿದ ಅವರು,ವಾರದ ಮಟ್ಟಿಗೆ 1 ರಿಂದ 9 ತರಗತಿಗಳ ಶಾಲೆಗಳಿಗೆ ರಜೆ ನೀಡುವುದು ಸೂಕ್ತ ಎನ್ನುವ ಸಲಹೆ ಮೇರೆಗೆ ವಸತಿ ಶಾಲೆಗಳು ಒಳಗೊಂಡಂತೆ 1 ರಿಂದ 9ನೇ ತರಗತಿಯವರೆಗಿನ ಶಾಲೆಗಳನ್ನು ಬಂದ್ ಮಾಡುವಂತೆ ಹೇಳಿ ಆದೇಶ ಹೊರಡಿಸಿದ್ದಾರೆ.
PublicNext
10/01/2022 07:35 pm