ಡೆಡ್ಲಿ ಸೋಂಕು ಕೊರೊನಾ ದಿಂದಾಗಿ ಶಾಲಾ ಕಾಲೇಜುಗಳನ್ನಾ ಬಂದ್ ಮಾಡಿದ ಸರ್ಕಾರ ಆನ್ ಲೈನ್ ಶಿಕ್ಷಣಕ್ಕೆ ಮೊರೆ ಹೋಗಿದೆ.
ಇದರಿಂದ ಮಕ್ಕಳು ಹಾಗೂ ಪೊಷಕರು ಅನುಭವಿಸಿದ ಕಿರಿಕಿರಿ ಅಷ್ಟಿಷ್ಟಲ್ಲ.
ಸದ್ಯ ಆನ್ ಲೈನ್ ಶಿಕ್ಷಣಕ್ಕೆ ಮಾರ್ಗಸೂಚಿಗಳನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.
ವಯೋಮಾನದ ಆಧಾರದ ಮೇಲೆ ಕ್ಲಾಸ್ ನಡೆಸುವ ಕುರಿತು ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ.
ಪ್ರಸ್ತುತ ಶಿಕ್ಷಣ ಇಲಾಖೆ ನೀಡಿರುವ ಮಾರ್ಗಸೂಚಿ
• 2ನೇ ಕ್ಲಾಸ್ ವರೆಗಿನ ಮಕ್ಕಳ ಆನ್ ಲೈನ್ ತರಗತಿಯಲ್ಲಿ ಪಾಲಕರ ಉಪಸ್ಥಿತಿ ಕಡ್ಡಾಯ.
• ಶಿಕ್ಷಣ ಇಲಾಖೆಯು ವಯೋಮಾನಕ್ಕನುಗುಣವಾಗಿ ದಿನಕ್ಕೆ 1 ರಿಂದ 4 ಗರಿಷ್ಠ ತರಗತಿಗಳು.
• 2ನೇ ತರಗತಿಯವರೆಗೆ ವಾರದಲ್ಲಿ ಪರ್ಯಾಯ ದಿನಗಳ ಬೋಧನೆ, 3 ನೇ ತರಗತಿಯ ನಂತರ ವಾರಕ್ಕೆ ಗರಿಷ್ಠ 5 ದಿನಗಳವರೆಗೆ ತರಗತಿ ನಡೆಸಲು ಅವಕಾಶ
• ಸಿಂಕ್ರೋನಸ್ (ನೇರ ಪ್ರಸಾರದ ತರಗತಿಗಳು) ಮತ್ತು ಅಸಿಂಕ್ರೋನಸ್ (ಪೂರ್ವ- ರಚನಾ ತರಗತಿ) ವಿಧಾನಗಳಿಗೆ ಅನುಮತಿಸಲಾಗಿದೆ ಎಂದು ಮಾರ್ಗಸೂಚಿ ಆದೇಶದಲ್ಲಿ ತಿಳಿಸಲಾಗಿದೆ.
ಪೂರ್ವ ಪ್ರಾಥಮಿಕದಿಂದ 1ನೇ ತರಗತಿವರೆಗಿನ ಆನ್ ಲೈನ್ ಬೋಧನೆಯು ಸಂವಾದ (ಇಂಟೆರ್ಯಾಕ್ಟಿವ್) ರೀತಿಯಲ್ಲಿರಬೇಕು.
ಪೂರ್ವ ಪ್ರಾಥಮಿಕದಿಂದ 2ನೇ ತರಗತಿವರೆಗಿನ ಮಕ್ಕಳಿಗೆ ಆಟ, ಕಥೆ, ಪ್ರಾಸ ಮತ್ತು ಇತರ ಅನ್ವೇಷಕ ಚಟುವಟಿಕೆಗಳಿಗಷ್ಟೇ ಸೀಮಿತವಾಗಿರಬೇಕು.
ಮಾರ್ಗಸೂಚಿ ಉಲ್ಲಂಘಿಸಿದರೆ ಶಿಕ್ಷಣ ಸಂಸ್ಥೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ-1983 (1995) ರ ಸೆಕ್ಷನ್ 124 ( 5) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ತರಗತಿವಾರು ಆನ್ಲೈನ್ ಕ್ಲಾಸ್ ಅವಧಿ
- ಪೂರ್ವ ಪ್ರಾಥಮಿಕ ತರಗತಿಗೆ ದಿನಕ್ಕೆ 30 ನಿಮಿಷ, 1 ಅವಧಿ ಮಾತ್ರ.
- 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ದಿನಕ್ಕೆ 30 ನಿಮಿಷದಂತೆ 2 ಟೀಚಿಂಗ್ ಕ್ಲಾಸ್
- 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ದಿನಕ್ಕೆ 30 ರಿಂದ 45 ನಿಮಿಷದಂತೆ 3 ಟೀಚಿಂಗ್ ಕ್ಲಾಸ್.
- 9 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ದಿನಕ್ಕೆ 4 ಟೀಚಿಂಗ್ ಕ್ಲಾಸ್.
PublicNext
29/10/2020 12:20 pm