ನವದೆಹಲಿ : ಹಬ್ಬದ ಸಂಭ್ರಮ ಕಸಿದ ಕೊರೊನಾವನ್ನು ಶಪಿಸದವರಿಲ್ಲ.
ನಿತ್ಯ ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯರು ಸದ್ಯ ದುರ್ಗೆಯ ಸ್ವರೂಪಿಗಳೆಂದರೆ ತಪ್ಪಾಗಲಾರದು.
ದುರ್ಗೆ ತನ್ನ ತ್ರಿಶೂಲದಿಂದ ಅಸುರನನ್ನು ಸಂಹರಿಸಿದಂತೆ ವೈದ್ಯರು ತಮ್ಮ ಅಸ್ತ್ರಗಳಿಂದ ಕೊರೊನಾವನ್ನು ಹೊಡೆದೊಡಿಸುತ್ತಿದ್ದಾರೆ.
ಸದ್ಯ ಕೊರೊನಾವೈರಸ್ ನ್ನು ಸಂಹಾರ ಮಾಡುತ್ತಿರುವ ವೈದ್ಯರ ರೂಪದಲ್ಲಿರುವ ದುರ್ಗಾ ಮೂರ್ತಿಯ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವೈದ್ಯರ ಕೋಟ್ ಧರಿಸಿರುವ ದುರ್ಗೆಯ ಕೈಯಲ್ಲಿ ತ್ರಿಶೂಲದ ಬದಲು ಸಿರಿಂಜ್ ಇದೆ, ಆಕೆ ಸಂಹಾರ ಮಾಡುತ್ತಿರುವ ಅಸುರ ಕೊರೊನಾ ವೈರಸ್.
ವಿಭಿನ್ನ ರೀತಿಯಲ್ಲಿರುವ ದೇವಿಮೂರ್ತಿಯ ಫೋಟೊವನ್ನು ಸಂಸದ ಶಶಿ ತರೂರ್ ಟ್ವೀಟಿಸಿ, ಕಲಾವೈಖರಿಯನ್ನು ಶ್ಲಾಘಿಸಿದ್ದಾರೆ.
ದೇವಿ ವೈರಸ್ ನ್ನು ಸಂಹಾರ ಮಾಡುತ್ತಿರುವ ಕಲಾತ್ಮಕತೆಯಿಂದ ಕೂಡಿದ ದುರ್ಗೆ ಕೊಲ್ಕತ್ತಾದ್ದು, ಅನಾಮಿಕ ಡಿಸೈನರ್ ಮತ್ತು ಶಿಲ್ಪಿಗೆ ನಮಸ್ಕಾರಗಳು ಎಂದು ತರೂರ್ ಟ್ವೀಟಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ವೈದ್ಯರೇ ದೇವಿಯ ಭಂಗಿಯಲ್ಲಿ ನಿಂತಿರುವ ಚಿತ್ರಗಳನ್ನು, ಕೊರೊನಾ ಸೇನಾನಿಗಳನ್ನು ಬಿಂಬಿಸುವ ಮೂರ್ತಿಗಳನ್ನು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.
PublicNext
20/10/2020 08:26 am