ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಟ್ಟೆನೋವೆಂದು ಖಾಸಗಿ ಕ್ಲಿನಿಕ್ ಸೇರಿದ ಮಹಿಳೆ ; ಆಪರೇಷನ್ ನೆಪದಲ್ಲಿ ಎರಡೂ ಕಿಡ್ನಿ ಕದ್ದ ವೈದ್ಯರು

ಪಾಟ್ನಾ: ವೈದ್ಯೋನಾರಾಯಣ ಅಂತಾರೇ.. ಕಾರಣ ದೇವರ ಸ್ವರೂಪದಲ್ಲಿ ನಮ್ಮ ಜೀವ ಕಾಪಾಡ್ತಾರೆ ಅಂತ ಆದ್ರೆ ಈ ಮಾತು ಸದ್ಯ ಈ ಘಟಯಿಂದ ಸುಳ್ಳು ಎಂದು ಭಾಸವಾಗುತ್ತೆ.

ಹೌದು..ಹೊಟ್ಟೆನೋವೆಂದು ಚಿಕಿತ್ಸೆಗಾಗಿ ಖಾಸಗಿ ಕ್ಲಿನಿಕ್‌ಗೆ ದಾಖಲಾಗಿದ್ದ, ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡುವ ನೆಪದಲ್ಲಿ ವೈದ್ಯರು ಎರಡೂ ಕಿಡ್ನಿಗಳನ್ನು ಕದ್ದಿರುವ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆಯ ಆರೋಗ್ಯ ತೀವ್ರವಾಗಿ ಕ್ಷೀಣಿಸಿದ ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಕಿಡ್ನಿ ತೆಗೆದಿರುವ ವಿಷಯ ತಿಳಿದುಬಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಹಿಳೆ ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಬರಿಯಾರ್‌ಪುರ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೇರೊಂದು ಆಸ್ಪತ್ರೆಗೆ ದಾಖಲಿಸಿದ ಬಳಿಕ ರಹಸ್ಯ ಬಯಲಾಗಿದೆ

ಸಂತ್ರಸ್ತ ಮಹಿಳೆ ಬಾಜಿರೌತ್ ಗ್ರಾಮದವರಾಗಿದ್ದು, ಮಹಿಳೆಯ ವೈದ್ಯಕೀಯ ವರದಿಗಳನ್ನು ನೀಡುವಂತೆ ಕುಟುಂಬಸ್ಥರನ್ನು ಕೇಳಿದಾಗ ಆಕೆಯ ಎರಡೂ ಕಿಡ್ನಿಗಳನ್ನು ತೆಗೆಯಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದಕ್ಕೂ ಮುನ್ನ ರೊಚ್ಚಿಗೆದ್ದ ಮಹಿಳೆಯ ಕುಟುಂಬಸ್ಥರು ಕ್ಲಿನಿಕ್ ಮುಂಭಾಗದಲ್ಲೇ ಗಲಾಟೆ ಆರಂಭಿಸಿದ್ದರು.

Edited By : Abhishek Kamoji
PublicNext

PublicNext

12/09/2022 06:12 pm

Cinque Terre

44.4 K

Cinque Terre

0

ಸಂಬಂಧಿತ ಸುದ್ದಿ