ಚಿಕ್ಕಮಗಳೂರು : ವೈದ್ಯರ ನಿರ್ಲಕ್ಷ್ಯಕ್ಕೆ ಹೆರಿಗೆ ವೇಳೆ ತುಂಬು ಗರ್ಭಿಣಿ ಸಾವನ್ನಪ್ಪಿದ್ದಲ್ಲದೇ ತಾಯಿ ಹೊಟ್ಟೆಯಲ್ಲಿ ಹಸುಗೂಸು ಅಸುನೀಗಿದ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ನಡೆದಿದೆ.
ಬಾಳೆಹೊನ್ನೂರು ನಿವಾಸಿ ಶ್ವೇತಾ (27) ಮೃತ ದುರ್ದೈವಿ.ವೈದ್ಯ ಎಲ್ಡೋಸ್ ನಿರ್ಲಕ್ಷ್ಯದಿಂದ ಈಕೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ.ಪೋಷಕರು ಗರ್ಭಿಣಿಯನ್ನ ಚಿಕ್ಕಮಗಳೂರಿಗೆ ತರಲು ಮುಂದಾಗಿದ್ದರು.ಆ ಸಂದರ್ಭದಲ್ಲಿ ಎನ್.ಆರ್.ಪುರ, ಶೃಂಗೇರಿಯಲ್ಲಿ ಅಮಾನತ್ತಾಗಿದ್ದ ವೈದ್ಯ ಎಲ್ಡೋಸ್ ನಾನೆ ಹೆರಿಗೆ ಮಾಡಿಸುತ್ತೇನೆಂದು ಹೆರಿಗೆಗೆ ಮುಂದಾಗಿದ್ದಾನೆ ನಂತರ ಆತನ
ನಿರ್ಲಕ್ಷ್ಯದಿಂದ ತಾಯಿ-ಮಗು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.
ವೈದ್ಯರ ವಿರುದ್ಧ ಆಸ್ಪತ್ರೆ ಮುಂಭಾಗ ಸ್ಥಳಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಆಸ್ಪತ್ರೆಗೆ ಮುತ್ತಿಗೆ ಹಾಕಲು ಸ್ಥಳೀಯರು ಯತ್ನಿಸುತ್ತಿದ್ದ ವೇಳೆ ಪೊಲೀಸ್ ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
PublicNext
12/12/2021 03:34 pm