ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಪಾರಿ ಕಿಲ್ಲರ್ ಬಾಂಬೆ ರವಿ ಕೋವಿಡ್‌ಗೆ ಬಲಿ

ಬೆಂಗಳೂರು: ಕುಖ್ಯಾತ ರೌಡಿ, ಸುಪಾರಿ ಕಿಲ್ಲರ್ ಬಾಂಬೆ ರವಿ ಹೆಮ್ಮಾರಿ ಕೊರೊನಾಗೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಕೊರೊನಾ ದೃಢಪಟ್ಟಿದ್ದರಿಂದ ಬಾಂಬೆ ರವಿ ಆಂಧ್ರ ಪ್ರದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ. ಇತ್ತೀಚೆಗೆ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿಯ ಕೊಲೆಗೆ ಸಂಚು ಹಾಕಿದ್ದ ಆರೋಪ ಬಾಂಬೆ ರವಿ ವಿರುದ್ಧ ಕೇಳಿ ಬಂದಿತ್ತು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದರು.

ಸೈಕಲ್ ರವಿ ವಿರೋಧಿ ಬಣದಲ್ಲಿ ಗುರುತಿಸಿದ್ದ ಈ ಕುಖ್ಯಾತ ರೌಡಿ ರವಿ ಹಿರಿಯ ಅಧಿಕಾರಿಗಳ ಜೊತೆ ಪಾರ್ಟಿ ಮಾಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಪರಾಧ ಕೃತ್ಯಗಳನ್ನು ನಡೆಸುವ ಮೂಲಕ ಬಾಂಬೆ ರವಿ ಕುಖ್ಯಾತಿಯನ್ನು ಪಡೆದುಕೊಂಡಿದ್ದ. ಸಾಕಷ್ಟು ಬೆದರಿಕೆ ಕರೆ, ಕೊಲೆ ಯತ್ನ ಸೇರಿದಂತೆ ಈತನ ವಿರುದ್ಧ 20ಕ್ಕೂ ಹೆಚ್ಚು ಪ್ರಕರಣ ದಾಖಲಾಗಿತ್ತು. ಆಸ್ಪತ್ರೆ ಸೇರಿದರೂ ದಂಧೆ ಬಿಡದ ಈತ, ಸೌತ್ ಆಫ್ರಿಕಾದ ನಂಬರ್‌ನಿಂದ ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.

Edited By : Vijay Kumar
PublicNext

PublicNext

01/09/2021 03:49 pm

Cinque Terre

57.48 K

Cinque Terre

5

ಸಂಬಂಧಿತ ಸುದ್ದಿ