ಬೆಂಗಳೂರು : ಸಾವಿನಲ್ಲೂ ಸಾರ್ಥಕತೆ ಮೆರೆದ ನಟ ಪುನೀತ್ ರಾಜ್ ಕುಮಾರ್ ಕಣ್ಣುಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ 4 ಮಂದಿಗೆ ಅಳವಡಿಸಲಾಗಿದೆ. ಬೆಂಗಳೂರು ನಾರಾಯಣ ನೇತ್ರಾಲಯದಲ್ಲಿ ಯಶಸ್ವಿ ಉಚಿತ ಶಸ್ತ್ರಚಿಕಿತ್ಸೆ ಮಾಡಿ ಕಣ್ಣುಗಳ ಭಾಗ ಅಳವಡಿಕೆ ಮಾಡಲಾಗಿದೆ.
ಇನ್ನು ಕಣ್ಣುಗಳ ಯಶಸ್ವಿ ಶಸ್ತ್ರಚಿಕಿತ್ಸೆ ಬಗ್ಗೆ ಮಾತನಾಡಿದ ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ.ಭುಜಂಗ ಶೆಟ್ಟಿ ರಾಜ್ ಕುಮಾರ್ ಫ್ಯಾಮಿಲಿ ಗೆ ನಾವು ಧನ್ಯವಾದ ಹೇಳುತ್ತೇವೆ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಅವರು ತೀರಿಹೋದಾಗ ಕಣ್ಣು ದಾನ ಮಾಡಿದ್ದರು.
ಈಗಾ ಪುನೀತ್ ತೀರಿಕೊಂಡಾಗ ಕುಟುಂಬ ಶೋಕದಲ್ಲಿದ್ದರು ಕಣ್ಣು ದಾನ ಮಾಡಿದ್ದಾರೆ. ಹಾಗಾಗಿ ಕುಟುಂಬಕ್ಕೆ ನಾನು ಧನ್ಯವಾದ ಹೇಳುವೆ ಎಂದರು.
ಶುಕ್ರವಾರ ಮಧ್ಯಾಹ್ನ 2.30ಕ್ಕೆ ಪುನೀತ್ ಕಣ್ಣು ದಾನವಾಗುತ್ತಿದ್ದಂತೆ ಆ ಕಣ್ಣುಗಳನ್ನು ನಮ್ಮ ಆಸ್ಪತ್ರೆಗೆ ತಂದೆವು ಶನಿವಾರ ಇಡೀ ದಿನ ಕಣ್ಣು ಜೋಡಣೆ ನಡೆಸಿದ್ದೇವೆ ಜೊತೆಗೆ ಸ್ವಲ್ಪ ಡಿಫೆರೆಂಟ್ ಆಗಿ ಈ ಸರ್ಜರಿ ಮಾಡಲಾಗಿದೆ.
ಕಣ್ಣು ದಾನ ಮಾಡಿದರೆ ಇಬ್ಬರಿಗೆ ಜೋಡಣೆ ಮಾಡುತ್ತೇವೆ ಆದರೆ ಅಪ್ಪು ಅವರದ್ದು ಡಿಫರೆಂಟ್ ಆಗಿ ಮಾಡಿನಾಲ್ಕು ಜನರಿಗೆ ಕಣ್ಣು ಹಾಕಲಾಗಿದೆ.ಲೇಟೆಸ್ಟ್ ಟೆಕ್ನಾಲಜಿ ಬಳಿಸಿ ಕಣ್ಣಿನ ಫ್ರಂಟ್ ಹಾಗೂ ಬ್ಯಾಕ್ ಪೋಷನ್ ಇರುತ್ತದೆ.ಕಾರ್ನಿಯಾ ತೊಂದರೆಗೊಳಗಾದವರಿಗೆ ಫ್ರಂಟ್ ಸಮಸ್ಯೆ ಆಗಿರುತ್ತದೆ.ಬ್ಯಾಕ್ ಪೋಷನ್ ಸರಿ ಇರುತ್ತದೆ. ಇಂತವರಿಗೆ ನಾವು ಸ್ಲೈಸ್ ಮಾಡಿ ಜೋಡಿಸಲಾಗಿದೆ. ಮುಂದಿನ ಭಾಗ ಡ್ಯಾಮೇಜ್ ಆಗಿರುವವರಿಗೆ ಫ್ರಂಟ್ ಕಾರ್ನಿಯಾ ಹಾಕಲಾಗಿದೆ. ಬ್ಯಾಕ್ ಪೋಷನ್ ಡ್ಯಾಮೇಜ್ ಆಗಿರುವವರಿಗೆ ಜೋಡಿಸಲಾಗಿದೆ. ಒಟ್ಟು ನಾಲ್ಕು ಜನರಿಗೆ ಜೋಡಣೆ ಮಾಡಲಾಗಿದೆ.
ಇದು ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ಒಂದೇ ದಿನ ಶಸ್ತ್ರ ಚಿಕಿತ್ಸೆ ಮಾಡಿ ಈ ರೀತಿ ನಾಲ್ಕು ಜನರಿಗೆ ಹಾಕಲಾಗಿದೆ ನಮ್ಮ ವೈದ್ಯರಿಗೆ ಧನ್ಯವಾದ ಎಂದಿದ್ದಾರೆ. ಈ ಮೂಲಕ ಅಪ್ಪು ನಾಲ್ಕು ಜನರ ಬಾಳಿಗೆ ಬೆಳಕಾಗಿದ್ದಾರೆ. ಒಬ್ಬ ಮಹಿಳೆ , 3 ಪುರುಷರಿಗೆ ಅಪ್ಪು ಕಣ್ಣುಗಳನ್ನು ಬಳಕೆ ಮಾಡಲಾಗಿದೆ. ಇನ್ನು ಹೆಮ್ಮೆ ಅಂದ್ರೆ ಅಪ್ಪು ಕಣ್ಣು ಪಡೆದವರು ಕರ್ನಾಟಕದವರು.
PublicNext
01/11/2021 01:52 pm