ಮುಂಬೈ : ಡೆಡ್ಲಿ ಸೋಂಕು ಕೊರೊನಾ ಕೈಯಲ್ಲಿ ಸಿಲುಕಿರುವ ಹಿಂದಿ ಕಿರುತೆರೆ ನಟಿ ದಿವ್ಯಾ ಭಟ್ನಾಗರ್ ಸ್ಥಿತಿ ಗಂಭೀರವಾಗಿದೆ.
ಮುಂಬೈನ ಆಸ್ಪತ್ರೆಯ ಐಸಿಯುನಲ್ಲಿ ನಟಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಟಾರ್ ಪ್ಲಸ್ ನ 'ಯೆ ರಿಷ್ತಾ ಕ್ಯಾ ಕೆಹಲಾತಾ ಹೈ' ಸೇರಿದಂತೆ ಹಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ದಿವ್ಯಾ ಮನೆಮಾತಾಗಿರುವ ನಟಿ.
ಅವರ ಆಮ್ಲಜನಕದ ಮಟ್ಟವು ಕುಸಿಯುತ್ತಿದ್ದ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪರಿಸ್ಥಿತಿ ಚಿಂತಾಜನಕವಾಗಿದೆ ಎಂದಿದ್ದಾರೆ ವೈದ್ಯರು ತಿಳಿಸಿದ್ದಾರೆ.
ದಿವ್ಯಾ ದಂಪತಿ ನಡುವೆ ಜಗಳವಾಗಿದ್ದರಿಂದ ಮಗಳೊಂದಿಗೆ ದಿವ್ಯಾ ಒಂಟಿಯಾಗಿ ವಾಸಿಸುತ್ತಿದ್ದಾರೆ.
ದೆಹಲಿಯಿಂದ ಮುಂಬೈಗೆ ಶಿಫ್ಟ್ ಆಗಿದ್ದ ನಟಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತಿದ್ದು ಮಗಳು ತುಂಬಾ ಚಿಂತಿತಳಾಗಿದ್ದಳು.
ಇದೀಗ ಕೊರೊನಾವೂ ಸೇರಿಕೊಂಡಿರುವ ಕಾರಣ, ಅವಳ ಪಾಡು ಹೇಳತೀರದು ಎಂದು ನಟಿಯ ತಾಯಿ ದುಃಖತೋಡಿಕೊಂಡಿದ್ದಾರೆ.
ನಟಿ ಶೀಘ್ರದಲ್ಲಿ ಗುಣಮುಖರಾಗಲೆಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಜತೆಗೆ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿಕೊಳ್ಳಿ ಎಂದು ನಟಿ ದಿವ್ಯಾ ಕೂಡ ಇನ್ ಸ್ಟಾಗ್ರಾಂನಲ್ಲಿ ಕೇಳಿಕೊಂಡಿದ್ದಾರೆ.
PublicNext
29/11/2020 01:43 pm