ಬೆಂಗಳೂರು: ಕೋವಿಡ್ ಇಡೀ ಜಗತ್ತಿನ ಜೀವನವನ್ನೇ ಏರುಪೇರು ಮಾಡಿತ್ತು. ಇದರಿಂದ ಐಟಿ ಉದ್ಯೋಗಿಗಳು ವರ್ಷಾನುಗಟ್ಟಲೆ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಆದರೆ, ಈಗ ಎಲ್ಲ ಕಂಪನಿಗಳು ತಮ್ಮ ಉದ್ಯೋಗಿಗಳನ್ನ ಕಂಪನಿಯಲ್ಲಿಯೇ ಕೆಲಸ ಮಾಡಲು ವಾಪಸ್ ಕರೆಸಿಕೊಂಡಿವೆ. ಇದರಿಂದ ಮತ್ತೊಂದು ಸಮಸ್ಯೆ ಎದುರಾಗಿದ್ದಾರೆ.
ಕೋವಿಡ್ ನಿಂದ ಜನ ಸಂಚಾರ ಮತ್ತು ವಾಹನ ಸಂಚಾರ ಕಡಿಮೆ ಆಗಿತ್ತು. ಇದರಿಂದ ವಾಯುಮಾಲಿನ್ಯವೂ ಬಹುತೇಕ ಕುಸಿದಿತ್ತು. ಇದರ ಜೊತೆಗೆ ಅಸ್ತಮಾ, ವೀಸಿಂಗ್,ಸೈನಸ್,ಕೆಮ್ಮು,ಉಸಿರಾಟದ ಸಮಸ್ಯೆಗಳ ಸಂಖ್ಯೆ ಕೂಡ ಕುಸಿದು ಬಿಟ್ಟಿತ್ತು.
ಆದರೆ, ಈಗ ಐಟಿ ಕಂಪನಿಗಳೆಲ್ಲ ವಾರದಲ್ಲಿ ಎರಡ್ಮೂರು ದಿನ ಕಂಪನಿಗೆ ಬಂದು ಕಚೇರಿಗೆ ಬರಬೇಕು ಅಂತಲೇ ಹೇಳಿವೆ. ಇದರಿಂದ ವಾಹನ ಸಂಚಾರ ಹೆಚ್ಚಾಗಿದೆ. ವಾಯುಮಾಲಿನ್ಯ ಹೆಚ್ಚುತ್ತಿದೆ. ಈ ಕಾರಣಕ್ಕೆ ಮತ್ತೆ ಅಸ್ತಮಾ,ವೀಸಿಂಗ್,ಸೈನಸ್,ಕೆಮ್ಮು,ಉಸಿರಾಟದ ತೊಂದರೆಗಳು ಮತ್ತೆ ಹೆಚ್ಚಾಗುತ್ತಿವೆ.
PublicNext
13/04/2022 03:40 pm