ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿ ತಗ್ಗುತ್ತಿದೆ ಕೋವಿಡ್ ಅಲೆ: ಆರೋಗ್ಯ ಸಚಿವ ಸುಧಾಕರ್

ಬೆಂಗಳೂರು:ಕೋವಿಡ್ ಅಲೆ ಕಡಿಮೆ ಆಗ್ತಿದೆ. ಇದಕ್ಕೆ ಸಾಕ್ಷಿಯನ್ನ ಸ್ವತಃ ಆರೋಗ್ಯ ಸಚಿವ ಡಾ.ಸುಧಾಕರ್ ಕೊಡ್ತಿದ್ದಾರೆ. ತಮ್ಮ ಟ್ವಿಟರ್ ಪೇಜ್ ನಲ್ಲಿ ಕಂಪ್ಲೀಟ್ ಡಿಟೈಲ್ ಕೊಟ್ಟಿದ್ದಾರೆ.ಬನ್ನಿ,ನೋಡೋಣ.

ಕೋವಿಡ್ ಕೇಸ್ ದಿನವೂ ಕಡಿಮೆ ಆಗುತ್ತಿದೆ. ರಾಜ್ಯದಲ್ಲಿಯೇ 10 ಕಿಂತಲೂ ಕಡಿಮೆ ಆಗುತ್ತಿದೆ. ಆ ಲೆಕ್ಕದಂತೆ ಇಂದು ರಾಜ್ಯದಲ್ಲಿ 8,425 ಹೊಸ ಕೇಸ್ ದಾಖಲಾಗಿವೆ.

ಬೆಂಗಳೂರು ನಲ್ಲೂ ಅಷ್ಟೇ. ಇಲ್ಲಿ ಕೇವಲ 3,822 ಇದೆ. ರಾಜ್ಯದ ಪಾಸಿಟಿವಿಟಿ ರೇಟ್ 6.5% ಇದೆ. ಬೆಂಗಳೂರು 5.9% ಮಾತ್ರ ಆಗಿದೆ.

ಕೋವಿಡ್ ನಿಂದ ಬಳಲಿ 19,800 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 97,781 ಇದ್ದರೇ, ಬೆಂಗಳೂರಿನಲ್ಲಿ 40 ಸಾವಿರ ಸಕ್ರಿಯ ಪ್ರಕರಣಗಳಿವೆ.

ಇನ್ನು ಕೋವಿಡ್ ನಿಂದ ರಾಜ್ಯದಲ್ಲಿ 47 ಜನ,ಬೆಂಗಳೂರಿನಲ್ಲಿ 17 ಜನ ಮೃತಪಟ್ಟಿದ್ದಾರೆ. ಕೋವಿಡ್ 1,29,337 ಜನ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ.

Edited By :
PublicNext

PublicNext

06/02/2022 06:48 pm

Cinque Terre

42.34 K

Cinque Terre

2