ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತಕ್ಕೆ WHO ಎಚ್ಚರಿಕೆ : ಕೋವಿಡ್ ಬಗ್ಗೆ ನಿರ್ಲಕ್ಷ್ಯ ಬೇಡ ನಿಗಾವಹಿಸಿ

ಹೊಸದಿಲ್ಲಿ: ಹೆಮ್ಮಾರಿ ಸೋಂಕು ತನ್ನ ಅಟ್ಟಹಾಸವನ್ನು ಮತ್ತೆ ಮುಂದುವರೆಸಿದೆ. ಇದರ ನಡುವೆ ಸರ್ಕಾರ ದಿನದಿಂದ ದಿನಕ್ಕೆ ಕೋವಿಡ್ ರೂಲ್ಸ್ ಗಳನ್ನು ಸಡಿಲಗೊಳಿಸುತ್ತಿದೆ. ಈ ಮಧ್ಯೆ ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಎಚ್ಚರಿಕೆವೊಂದನ್ನು ನೀಡಿದೆ.

ಭಾರತದ ಕೆಲವು ನಗರಗಳಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಇಳಿಕೆಯಾಗುವುದು ಆರಂಭವಾಗಿದ್ದರೂ, ಅಪಾಯ ಮಾತ್ರ ಇನ್ನೂ ಉಳಿದುಕೊಂಡಿದೆ. ಸೋಂಕು ಪ್ರಸರಣ ತಗ್ಗಿಸುವುದರ ಮೇಲೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ನಿರ್ದಿಷ್ಟ ಕ್ರಮಗಳನ್ನು ಜಾರಿಗೊಳಿಸುವುದರ ಮೇಲೆ ಗಮನ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಹಿರಿಯ ಅಧಿಕಾರಿ ಪೂನಮ್ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿರುವ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಬ್ಲ್ಯೂಎಚ್ ಒ (WHO) ಆಗ್ನೇಯ ಏಷ್ಯಾ ವಿಭಾಗದ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಮ್ ಖೇತ್ರಪಾಲ್ ಸಿಂಗ್, ಕೊರೊನಾ ವೈರಸ್ ಸೋಂಕಿನ ಅಪಾಯ ಅಧಿಕ ಮಟ್ಟದಲ್ಲಿಯೇ ಇದೆ. ಯಾವುದೇ ದೇಶವು, ಅವುಗಳ ಸದ್ಯದ ಪರಿಸ್ಥಿತಿ ಏನೇ ಇದ್ದರೂ, ಅಪಾಯದ ಸನ್ನಿವೇಶದಿಂದ ಸಂಪೂರ್ಣ ಹೊರಬಂದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Edited By : Nirmala Aralikatti
PublicNext

PublicNext

29/01/2022 10:55 pm

Cinque Terre

62.53 K

Cinque Terre

4

ಸಂಬಂಧಿತ ಸುದ್ದಿ