ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸೋಂಕು ಎಡ್ಮೂರು ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸದ್ಯದ ಡಾಟಾ ಹೇಳುವಂತೆ ನಾವೆಲ್ಲ ಮೂರು M ರೂಲ್ಸ್ ಮಾಡಲೇಬೇಕಾಗಿದೆ. ಇಲ್ಲವಾದರೆ ಕಷ್ಟ ಆಗುತ್ತದೆ ಅನ್ನೋ ಅರ್ಥದಲ್ಲಿಯೇ ಆರೋಗ್ಯ ಸಚಿವ ಡಾ.ಸುಧಾಕರ್ ಇಂದು ತಮ್ಮ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ.
ಹೌದು.ಕೊರೊನಾ ನಿಯಂತ್ರಣಕ್ಕೆ Mask up, Maintain social distance, Maintain hand hygiene ಈ ಮೂರು M ರೂಲ್ಸ್ ಅನ್ನ ಪಾಲಿಸಲೇಬೇಕಾಗಿದೆ. ಇಲ್ಲವಾದರೆ ಕೊರೊನಾ ನಮ್ಮನ್ನ ಆವರಿಸಿಕೊಳ್ಳುತ್ತದೆ. ಹಾಗಂತ ಡಾಕ್ಟರ್ ಸುಧಾಕರ್ ಸುಮ್ನೆ ಹೇಳಿಲ್ಲ. ಕೊರೊನಾ ಕೇಸಿನ ಡೇಟಾ ಇಟ್ಟುಕೊಂಡೇ ಟ್ವಿಟರ್ ನಲ್ಲಿ ಹೇಳಿದ್ದಾರೆ.
ಡಿಸೆಂಬರ್-27 ರಿಂದ ಜನವರಿ-04 ವರೆಗೂ ಎಷ್ಟು ಕೇಸ್ ಆಗಿವೇ ಅಂತ ಡಿಲೇಟ್ ಆಗಿರೋ ಒಂದು ಚಾರ್ಟ್ ಅನ್ನೇ ಇಲ್ಲಿ ಶೇರ್ ಮಾಡಿದ್ದಾರೆ. ಅಲ್ಲಿಗೆ ನಾವೆಲ್ಲ ಅತಿ ಹೆಚ್ಚು ಜಾಗೃತರಾಗಿರಲೇಬೇಕು ಅನ್ನೋದನ್ನ ಆರೋಗ್ಯ ಸಚಿವ ಸುಧಾಕರ್ ಸೋಷಿಯಲ್ ಮೀಡಿಯಾ ಮೂಲಕ ಹೇಳಿದ್ದಾರೆ.
PublicNext
04/01/2022 08:41 pm