ನವದೆಹಲಿ: ದೇಶದಲ್ಲಿ ಈಗಾಗಲೇ ಕೋವಿಡ್ ಮೂರನೇ ಅಲೆ ಆತಂಕ ಶುರುವಾಗಿದೆ. ಇದರ ನಡುವೆ 2022ರ ಫೆಬ್ರುವರಿಯಲ್ಲಿ ಸೋಂಕಿನ ಪ್ರಮಾಣ ಉತ್ತುಂಗಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ವಿಜ್ಞಾನಿಗಳು ನಡೆಸಿರುವ ಅಧ್ಯಯನವೊಂದು ಹೇಳಿದೆ.
ಹೌದು ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಕೋವಿಡ್ 3ನೇ ಅಲೆ ಆರಂಭವಾಗಿದೆ. ಅಷ್ಟೇನೂ ತೊಂದರೆ ನೀಡದ ಸೋಂಕಿನ ಪ್ರಮಾಣ ಫೆಬ್ರುವರಿಯಲ್ಲಿ ಹೆಚ್ಚಾಗಲಿದೆ. ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ ಸಂಶೋಧಕರ ತಂಡವು ಈ ಅಧ್ಯಯನ ನಡೆಸಿದ್ದು, ಇನ್ನಷ್ಟೆ ಉನ್ನತ ತಜ್ಞರಿಂದ ಪರಾಮರ್ಶೆಗೆ ಒಳಪಡಬೇಕಿದೆ.
ಸಾಂಕ್ರಾಮಿಕದ ಮೊದಲ ಎರಡು ಅಲೆಗಳ ಡೇಟಾವನ್ನು ಬಳಸಿಕೊಂಡು ಮೂರನೇ ಅಲೆಯ ಮುನ್ಸೂಚನೆಯನ್ನು ನೀಡಲಾಗಿದೆ. ತಂಡವು ಈಗಾಗಲೇ ಮೂರನೇ ಅಲೆಯನ್ನು ಎದುರಿಸುತ್ತಿರುವ ವಿವಿಧ ದೇಶಗಳ ಡೇಟಾವನ್ನು ಬಳಸಿಕೊಂಡಿದೆ. ಆ ದೇಶಗಳ ದೈನಂದಿನ ಪ್ರಕರಣಗಳ ಏರಿಕೆಯ ಡೇಟಾವನ್ನು ಬಳಸಿಕೊಂಡು ಭಾರತದಲ್ಲಿ ಮೂರನೇ ತರಂಗದ ಪರಿಣಾಮ ಮತ್ತು ಟೈಮ್ ಲೈನ್ ಅನ್ನು ಊಹಿಸಲಾಗಿದೆ.
PublicNext
22/12/2021 10:26 pm