ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಅತಿ ಹೆಚ್ಚು ಕಾಣಿಸುತ್ತಿದೆ. ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆ ಆಗಿದೆ. ಹಾಗಾಗಿಯೇ ಹಾಸ್ಟೆಲ್ ಮತ್ತು ಕಾಲೇಜ್ ಅನ್ನ ಈಗ ಕಂಟೈನಮೆಂಟ್ ಜೋನ್ ಎಂದು ಘೋಷಿಸಲಾಗಿದೆ.
ಕೊರೊನಾ ಕಾಣಿಸಿಕೊಂಡ ಬೆನ್ನಲ್ಲಿಯೇ ಇಲ್ಲಿ ಒಮಿಕ್ರಾನ್ ಸೋಂಕಿನ ಐದು ಪ್ರಕರಣಗಳು ಪತ್ತೆ ಆಗಿವೆ.
ಕ್ಲಸ್ಟರ್-01 ರಲ್ಲಿ 14 ಕೊರೊನಾ ಪ್ರಕರಣಗಳು ಪತ್ತೆ ಆಗಿವೆ. ಇದರಲ್ಲಿ 4 ಒಮಿಕ್ರಾನ್ ಕೇಸ್ ಪತ್ತೆ ಆಗಿವೆ. ಕ್ಲಸ್ಟರ್-02 ರಲ್ಲಿ 19 ಕೊರೊನಾ ಪ್ರಕರಣಗಳು ಪತ್ತೆ ಆಗಿವೆ. ಇದರಲ್ಲಿ ಒಂದು ಒಮಿಕ್ರಾನ್ ಕೇಸ್ ಪತ್ತೆ ಆಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಟ್ವಿಟರ್ ಮೂಲಕ ತಿಳಿಸಿದ್ದಾರೆ.
PublicNext
19/12/2021 07:25 am