ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೋವಿಡ್ ಪ್ರಕರಣ ಏರಿಕೆ!: ಎಚ್ಚರದಿಂದ ಇರೋಣ ಜೋಕೆ

ವರದಿ: ಗಣೇಶ್ ಹೆಗಡೆ

ಬೆಂಗಳೂರು: ನಗರದಲ್ಲಿ ಇಬ್ಬರಲ್ಲಿ ಒಮಿಕ್ರಾನ್ ಕೋವಿಡ್ ರೂಪಾಂತರಿ ತಳಿ ಪತ್ತೆಯಾದ ಬೆನ್ನಲ್ಲೇ ಕೋವಿಡ್ ಸೋಂಕಿತ ಪ್ರಕರಣ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ.

ಡಿ.2ರಂದು 206 ಜನರಲ್ಲಿ ಕೋವಿಡ್‌ ಪಾಸಿಟಿವ್ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ 5,024ಕ್ಕೆ ಏರಿಕೆಯಾಗಿದೆ. ನಿನ್ನೆ ಇಬ್ಬರು ಮೃತಪಟ್ಟಿದ್ದಾರೆ. ನಗರದಲ್ಲಿ ಈವರೆಗೂ ವೈರಸ್​ನಿಂದ ಮೃತಪಟ್ಟವರ ಸಂಖ್ಯೆ 16341ಕ್ಕೆ ಏರಿಕೆಯಾಗಿದೆ. ಎರಡೂ ಅಲೆಯ ಪಾಸಿಟಿವ್ ಪ್ರಕರಣಗಳ ಸಂಖ್ಯೆ 12,56,823 ಕ್ಕೆ ಏರಿಕೆಯಾಗಿದ್ದರೆ, ಗುಣಮುಖರಾದವರ ಸಂಖ್ಯೆ 12,35,458 ಇದೆ.

ಡಿಸೆಂಬರ್ 1ರಂದು 165 ಜನರಿಗೆ ಕೋವಿಡ್ ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದರು. ನವೆಂಬರ್ 30 ರಂದು 185 ಜನಕ್ಕೆ ಪಾಸಿಟಿವ್ ಕಂಡುಬಂದಿದ್ದರೆ, ಆರು ಜನ ಮೃತಪಟ್ಟಿದ್ದರು. ನವೆಂಬರ್ 29 ರಂದು 131 ಜನರಿಗೆ ವೈರಸ್​ ದೃಢಪಟ್ಟಿತ್ತು. ಇಬ್ಬರು ಮೃತಪಟ್ಟಿದ್ದರು. ಈವರೆಗಿನ ಕೋವಿಡ್ ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದಾಗ, ನಿನ್ನೆ ಅತಿ ಹೆಚ್ಚು ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. 2ನೇ ಕೋವಿಡ್ ಅಲೆ ಆತಂಕ ಕಡಿಮೆ ಆದ ಬಳಿಕ ಇದೀಗ ಮತ್ತೆ ಕೋವಿಡ್ ಏರುಗತಿಯಲ್ಲಿ ಸಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಕಳೆದ ಹತ್ತು ದಿನಗಳಿಂದ ಬೆಳ್ಳಂದೂರು ವಾರ್ಡ್​ನಲ್ಲಿ 6, ದೊಡ್ಡನೆಕ್ಕುಂದಿ, ಹಗದೂರು ವಾರ್ಡ್​ಗಳಲ್ಲಿ ತಲಾ 4, ಆರ್ ಆರ್ ನಗರ, ಕಾಡುಗೋಡಿ, ವಸಂತಪುರ ಬೇಗೂರು, ವರ್ತೂರು, ಹೆಚ್​ಎಸ್ಆರ್ ಲೇಔಟ್, ಸಿವಿ ರಾಮನ್ ನಗರ ವಾರ್ಡ್​ಗಳಲ್ಲಿ ತಲಾ 3 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ನಗರದಲ್ಲಿ ಒಟ್ಟು 56 ಮೈಕ್ರೋ ಕಂಟೈನ್​ಮೆಂಟ್​ ಪ್ರದೇಶಗಳನ್ನು ಗುರುತಿಸಲಾಗಿದೆ.

Edited By : Nagaraj Tulugeri
PublicNext

PublicNext

03/12/2021 02:29 pm

Cinque Terre

54.42 K

Cinque Terre

0

ಸಂಬಂಧಿತ ಸುದ್ದಿ