ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ SDM ಕಾಲೇಜ್ ಕೊರೊನಾ ಪ್ರಕರಣ : ನೆರೆ ರಾಜ್ಯಗಳ ವಿದ್ಯಾರ್ಥಿಗಳಿಂದ ಸೋಂಕು ಶಂಕೆ

ಹುಬ್ಬಳ್ಳಿ : ದೀಪಾವಳಿ ರಜೆ ನಂತರ ಬೇರೆ ರಾಜ್ಯಗಳಿಂದ ಮರಳಿ ಬಂದಿದ್ದ ಮೆಡಿಕಲ್ ವಿದ್ಯಾರ್ಥಿಗಳ ಕೊರೊನಾ ತಪಾಸಣೆ ಮಾಡದಿರುವುದೆ ಈ ಸಂಖ್ಯೆಯಲ್ಲಿ ಕೊರೊನಾ ಸೋಂಕು ಕಾಣಸಿಕೊಳ್ಳಲು ಕಾರಣವೇ?

ಬಲ್ಲ ಮೂಲಗಳ ಪ್ರಕಾರ, ಕೊರೊನಾ ಪೀಡಿತ ರಾಜ್ಯಗಳ ವಿದ್ಯಾರ್ಥಿಗಳು ದೀಪಾವಳಿ ರಜೆಗಾಗಿ ತಮ್ಮ ತಮ್ಮ ಊರಿಗೆ ತೆರಳಿದ್ದರು. ಆದರೆ ಮರಳಿ ಬಂದ ಮೇಲೆ ಅವರನ್ನು ಕೊರೊನಾ ತಪಾಸಣೆಗೆ ಒಳಪಡಿಸದಿರುವುದೇ ಈ ಅನಾಹುತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಎಲ್ಲರೂ ಕೊರೊನಾ ಎರಡೂ ಲಸಿಕೆ ಪಡೆದಿರುವುದರಿಂದ ಯಾವುದೇ ತೊಂದರೆ ಇಲ್ಲವೆಂದು SDM ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿ ಭಾವಿಸಿರಬಹುದು. ಆದರೆ ಒಂದು ಸಣ್ಣ ನಿರ್ಲಕ್ಷ್ಯದಿಂದ ಇಂದು ಕ್ಯಾಂಪಸ್ಸಿನ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ನೂರಕ್ಕೂ ಹೆಚ್ಚು ಸಿಬ್ಬಂದಿ ಕೊರೊನಾ ಸೋಂಕಿನ ಆತಂಕ ಪಡಬೇಕಾಗಿದೆ.

ಕಳೆದ ಎರಡ್ಮೂರು ದಿನಗಳಿಂದ ಕೊರೊನಾ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗ ತೊಡಗಿದ್ದರೂ ಜಿಲ್ಲಾಡಳಿತದ ಗಮನಕ್ಕೆ ತಾರದಿರುವುದು ಅಥವಾ ಬಾರದಿರುವುದು ವಿಷಾದ ಸಂಗತಿ.

ಕಾಲೇಜ್ ಕ್ಯಾಂಪಸ್ ಆಸ್ಪತ್ರೆ ಆವರಣದಲ್ಲಿಯೇ ಇರುವುದರಿಂದ ನಿತ್ಯ ಸಾವಿರಾರು ರೋಗಿಗಳು ಹಾಗೂ ಅವರ ಸಂಬಂಧಿಕರು ಬಂದು ಹೋಗುತ್ತಾರೆ. ಇಷ್ಟೇ ಅಲ್ಲ ನೂರಾರು ರೋಗಿಗಳು ಅಡ್ಮಿಟ್ ಆಗಿರುತ್ತಾರೆ. ಸೋಂಕಿತ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಆಸ್ಪತ್ರೆ ಆವರಣದಲ್ಲಿ ಸುತ್ತಾಡಿರುವ ಸಾಧ್ಯತೆಗಳಿರುತ್ತವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಸೂಕ್ತ.

Edited By :
PublicNext

PublicNext

25/11/2021 01:38 pm

Cinque Terre

28.75 K

Cinque Terre

0

ಸಂಬಂಧಿತ ಸುದ್ದಿ