ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ ಡೆಡ್ಲಿ ಸೋಂಕು ಕೊರೊನಾ ಇನ್ನೇನು ತಗ್ಗುತ್ತಿದ್ದೇ ಎನ್ನುವಷ್ಟರಲ್ಲಿ ವಿದೇಶದಲ್ಲಿ ಮತ್ತೆ ತನ್ನ ಆರ್ಭಟವನ್ನು ಶುರು ಮಾಡಿದೆ.
ಯುರೋಪಿನ 47 ದೇಶಗಳ 39 ದೇಶಗಳಲ್ಲಿ ಪಾಸಿಟಿವ್ ಕೊರೊನಾ ರೋಗಿಗಳು 23% ದಷ್ಟು ತ್ವರಿತ ಗತಿಯಲ್ಲಿ ಮತ್ತು ಸಾವುಗಳು 14% ದಷ್ಟು ಹೆಚ್ಚುತ್ತಿದೆ.
ಈಗಷ್ಟೇ ಸುಧಾರಣೆಯ ಹಾದಿ ಹಿಡಿದಿರುವ ಜರ್ಮನಿ, ಇಟಲಿ ಮತ್ತು ಸ್ಪೇನ್ ನಲ್ಲಿ ಹೊಸ ಕೇಸ್ ಗಳ ಸಂಖ್ಯೆ ಹೆಚ್ಚುತ್ತಿವೆ. ಏಷ್ಯಾದ ದೇಶಗಳಲ್ಲಿ ಕೊರೊನಾ ಪರಿಸ್ಥಿತಿ ಸುಧಾರಿಸುತ್ತಿದೆ. ಏಷ್ಯಾದಲ್ಲಿ ಪಾಸಿಟಿವ್ ಪ್ರಕರಣಗಳು 8% ಮತ್ತು ಸಾವುಗಳು 4% ರಷ್ಟು ಕಡಿಮೆಯಾಗಿವೆ.
ಯುಕೆಯಲ್ಲಿ ಹೊಸ ಕೊರೊನಾ ಪ್ರಕರಣಗಳು 16% ನಷ್ಟು ಏರಿಕೆ ದಾಖಲಿಸಿದೆ, ಆದರೆ ರಷ್ಯಾವು 17% ನಷ್ಟು ವೇಗವನ್ನು ದಾಖಲಿಸಿದೆ. ಚಳಿಗಾಲದ ಉತ್ಕರ್ಷದ ನಂತರ ಹೊಸ ಪ್ರಕರಣಗಳು ಮತ್ತಷ್ಟು ಉಲ್ಬಣವಾಗುವ ನಿರೀಕ್ಷೆಯಿದೆ ಎಂದು ಡಬ್ಲ್ಯೂಎಚ್ಒ ಎಚ್ಚರಿಸಿದೆ.
PublicNext
26/10/2021 07:10 am