ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಯೋಗಮಂದಿರ ಬಳಿಯ ನದಿಯಲ್ಲಿ ಒಂದೇ ಕುಟುಂಬದ ಮೂವರು ನೀರುಪಾಲು

ಬಾಗಲಕೋಟೆ: ಪಿಕ್ನಿಕ್​ಗೆಂದು ಬಾದಾಮಿಗೆ ಬಂದಿದ್ದ ಒಂದೇ ಕುಟುಂಬದ ಮೂವರು ಬಾಗಲಕೋಟೆ ಜಿಲ್ಲೆಯ ಶಿವಯೋಗಮಂದಿರ ಬಳಿಯ ನದಿಯಲ್ಲಿ ನೀರುಪಾಲಾದ ದುರ್ಘಟನೆ ನಡೆದಿದೆ.

ಗದಗ ಜಿಲ್ಲೆಯ ರೋಣದ ನಿವಾಸಿಗಳಾದ ವಿಶ್ವನಾಥ ಮಾವಿನಮರದ (40), ಶ್ರೀದೇವಿ ಮಾವಿನಮರದ (32) ಹಾಗೂ ನಂದಿನಿ ಮಾವಿನಮರದ (12) ನದಿಯಲ್ಲಿ ಕೊಚ್ಚಿಹೋದ ದುರ್ದೈವಿಗಳು.

ಶ್ರೀದೇವಿ ಅವರು ಮೈದುನ ವಿಶ್ವನಾಥ ಹಾಗೂ ವಿಶ್ವನಾಥ ಅವರ ಮಗಳು ನಂದಿನಿ ಜೊತೆಗೆ ಬಾದಾಮಿಯ ಬನಶಂಕರಿ ದೇವಿ ದೇವಸ್ಥಾನಕ್ಕೆ ಬಂದಿದ್ದರು. ದೇವಿಯ ದರ್ಶನ ಪಡೆದ ಅವರು ನಂತರ ಬಾದಾಮಿ ತಾಲೂಕಿನ ಶಿವಯೋಗಮಂದಿರಕ್ಕೆ ತೆರಳಿದ್ದರು. ಉಪಹಾರ ಸೇವಿಸಲು ಶಿವಯೋಗಮಂದರ ನದಿ ದಡದಲ್ಲಿ ಕುಳಿತಿದ್ದರು. ಈ ವೇಳೆ ಕೈ ತೊಳೆಯಲು ಹೋದ ಶ್ರೀದೇವಿ ಮಾವಿನಮರದ ಜಾರಿ ನದಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋದ ವಿಶ್ವನಾಥ ಹಾಗೂ ನಂದಿನಿ ಸಹ ಜಾರಿ ನದಿಗೆ ಬಿದ್ದಿದ್ದಾರೆ. ಶ್ರೀದೇವಿ ಮೃತದೇಹ ಪತ್ತೆಯಾಗಿದ್ದು, ಬಾದಾಮಿ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಉಳಿದವರ ಶೋಧ ನಡೆಸುತ್ತಿದ್ದಾರೆ.

Edited By : Vijay Kumar
PublicNext

PublicNext

22/08/2021 05:40 pm

Cinque Terre

46.95 K

Cinque Terre

0

ಸಂಬಂಧಿತ ಸುದ್ದಿ