ಬೆಂಗಳೂರು: ಲಂಡನ್‌ನಿಂದ ಬೆಂಗಳೂರಿಗೆ ವಾಪಸ್ ಆಗಿರುವ ತಾಯಿ ಹಾಗೂ ಮಗಳಿಗೆ ಕೋವಿಡ್-೧೯ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೋಂಕಿತ ತಾಯಿ ಹಾಗೂ ಮಗಳು ಬೊಮ್ಮನಹಳ್ಳಿಯ ವಿಠಲನಗರದ ನಿವಾಸಿಗಳು ಎಂಬ ಮಾಹಿತಿ ಲಭಿಸಿದೆ. 35 ವರ್ಷದ ಮಹಿಳೆ ಮತ್ತು 6 ವರ್ಷದ ಮಗಳು ಕೆಲ ದಿನಗಳ ಹಿಂದೆ ಲಂಡನ್‌ನಿಂದ ಬೆಂಗಳೂರಿಗೆ ಬಂದಿದ್ದರು. ಸದ್ಯ ಅವರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಕೊರೊನಾ ಹೊಸ ತಳಿಯ ರೂಪ ತಿಳಿಯಲು ಇಬ್ಬರ ಸ್ಯಾಂಪಲ್ ಅನ್ನು ಪುಣೆಗೆ ರವಾನಿಸಲಾಗಿದೆ.
PublicNext
22/12/2020 07:27 pm