ಹಾಗಲ ಕಾಯಿ ಜ್ಯೂಸ್
• ಹಾಗಲ ಕಾಯಿ ನಿಮಗೆಲ್ಲಾ ಗೊತ್ತಿರುವ ಹಾಗೆ ಒಂದು ಕಹಿಯಾದ ತರಕಾರಿ ತನ್ನ ಕಹಿಯ ಪ್ರಭಾವದಿಂದಲೇ ಇಂದು ಹೆಚ್ಚು ಪ್ರಸಿದ್ಧಿಯಾಗಿರುವ ಹಾಗಲಕಾಯಿ ನಮ್ಮ ದೇಹದ ಸಕ್ಕರೆ ಪ್ರಮಾಣವನ್ನು ಅಚ್ಚುಕಟ್ಟಾಗಿ ನಿಯಂತ್ರಣ ಮಾಡಿ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗುವಂತೆ ಮಾಡುತ್ತದೆ.
• ಅದರಿಂದ ನಾವು ಸೇವನೆ ಮಾಡುವ ಯಾವುದೇ ಆಹಾರ ಪದಾರ್ಥದಲ್ಲಿ ಕಂಡು ಬರುವ ಸಕ್ಕರೆ ಪ್ರಮಾಣ ಗ್ಲುಕೋಸ್ ಅಂಶಕ್ಕೆ ಬದಲಾಗಿ ನಮ್ಮ ದೇಹದಲ್ಲಿ ಬಹಳ ಬೇಗನೆ ಜೀರ್ಣ ಆಗುತ್ತದೆ.
ಇದರಿಂದ ಯಾವುದೇ ಪ್ರಕಾರದಲ್ಲೂ ಸಕ್ಕರೆ ಅಂಶ ನಮ್ಮ ದೇಹದಲ್ಲಿ ಬೊಜ್ಜು ಅಥವಾ ಕೊಬ್ಬಿನ ರೂಪದಲ್ಲಿ ಶೇಖರಣೆ ಆಗುವುದಿಲ್ಲ.
ಉಗುರು ಬೆಚ್ಚಗಿನ ನೀರು ಮತ್ತು ನಿಂಬೆ ಹಣ್ಣಿನ ರಸ
• ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ಹೋಳು ನಿಂಬೆ ಹಣ್ಣು ಹಿಂಡಿದರೆ ನಿಮಗೆ ಸಿಗುವುದು ಕೇವಲ ಆರು ಕ್ಯಾಲರಿಗಳು ಮಾತ್ರ.
ಹಾಗಾಗಿ ನಿಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ಹಾಕುವಂತಹ ಈ ಪಾನೀಯವನ್ನು ದಿನದಲ್ಲಿ ಹಲವು ಬಾರಿ ಕುಡಿಯುವುದರಿಂದ ನಿಮಗೆ ಹೊಟ್ಟೆ ತುಂಬಿದಂತಹ ಅನುಭವ ಉಂಟಾಗಿ ಬೇರೆ ಬಗೆಯ ಆಹಾರಗಳನ್ನು ಸೇವನೆ ಮಾಡಬೇಕು ಎನ್ನುವ ಬಯಕೆ ಕಡಿಮೆ ಆಗುತ್ತದೆ. ಇದರಿಂದ ನಿಮ್ಮ ದೇಹದ ತೂಕ ಸಹಜವಾಗಿ ನಿಯಂತ್ರಣಕ್ಕೆ ಬರುತ್ತದೆ.
ಬೀಟ್ರೂಟ್ ಜ್ಯೂಸ್
• ಬೀಟ್ರೂಟ್ ನಲ್ಲಿ ಅಪಾರ ಪ್ರಮಾಣದ ನಾರಿನ ಅಂಶ ಕಂಡು ಬರುವ ಕಾರಣ, ದೀರ್ಘ ಕಾಲದವರೆಗೆ ಹೊಟ್ಟೆ ಹಸಿವಿನ ನಿಯಂತ್ರಣವಾಗುತ್ತದೆ.
ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಇದೊಂದು ಅತ್ಯದ್ಭುತ ಪಾನೀಯ ಎಂದು ಹೇಳಬಹುದು.
ದಾಲ್ಚಿನ್ನಿ ಮತ್ತು ಬಿಸಿ ನೀರು
• ದೇಹದ ತೂಕ ಕಡಿಮೆ ಮಾಡುವಲ್ಲಿ ದಾಲ್ಚಿನ್ನಿ ಅಥವಾ ಚಕ್ಕೆ ಹೆಚ್ಚು ಪರಿಣಾಮಕಾರಿ ಎಂದು ಹೇಳುತ್ತಾರೆ.
• ಜೊತೆಗೆ ದಾಲ್ಚಿನ್ನಿಯಲ್ಲಿ ಸಾಕಷ್ಟು ಒಳ್ಳೆಯ ಔಷಧೀಯ ಪರಿಣಾಮಗಳು ಕಂಡು ಬರುವ ಕಾರಣ ನಿಮ್ಮ ಆರೋಗ್ಯವನ್ನು ವಿವಿಧ ಬಗೆಯ ಆರೋಗ್ಯದ ಅಸ್ವಸ್ಥತೆ ಗಳಿಂದ ಕಾಪಾಡುತ್ತದೆ.
• ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿ ಮಲಗುವ ಮುಂಚೆ ಈ ಪಾನೀಯವನ್ನು ಕುಡಿದರೆ ಒಳ್ಳೆಯದು.
PublicNext
15/12/2020 06:11 pm