ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಸೆಂಬರ್ 1ರಿಂದ ಅನ್ ಲಾಕ್ 6.0 ನೂತನ ಮಾರ್ಗಸೂಚಿ

ನವದೆಹಲಿ: ದೇಶದಲ್ಲಿ ಡೆಡ್ಲಿ ಸೋಂಕು ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಸ್ಥಳೀಯವಾಗಿ ಲಾಕ್ ಡೌನ್ ನಿಯಮಗಳನ್ನು ಜಾರಿಗೊಳಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡುವುದರ ಜತೆಗೆ ಅನೇಕ ನಿಯಮಗಳನ್ನು ಒಳಗೊಂಡ ಅನ್ ಲಾಕ್-6 ರ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಡಿಸೆಂಬರ್ 1ರಿಂದ ನೂತನ ಮಾರ್ಗಸೂಚಿ ಜಾರಿಗೆ ಬರಲಿದೆ. ಕೊರೊನಾ ನಿಯಂತ್ರಣ ಮತ್ತು ಕಟ್ಟುನಿಟ್ಟಾದ ಪಾಲನೆಯನ್ನು ಒಳಗೊಂಡ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ತಿಳಿಸಿದೆ.

ರಾಜ್ಯಗಳು ಕಂಟೇನ್ಮೆಂಟ್ ವಲಯಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಬಹುದು. ಆದರೆ, ಕಂಟೇನ್ಮೆಂಟ್ ವಲಯದ ಹೊರಗಿನ ಪ್ರದೇಶಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಜಾರಿಗೊಳಿಸುವ ಮೊದಲು ಕೇಂದ್ರದ ಅನುಮೋದನೆಯನ್ನು ಪಡೆಯುವುದು ಕಡ್ಡಾಯ ಎಂದು ಸ್ಪಷ್ಟಪಡಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯದಿಂದ ಅನುಮತಿ ಪಡೆದವರ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ.

ಶೇಕಡ 50 ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳು.

ಕ್ರೀಡಾಪಟುಗಳ ತರಬೇತಿಗಾಗಿ ಈಜುಕೊಳಗಳ ಬಳಕೆ.

ವ್ಯವಹಾರ ಉದ್ದೇಶಗಳಿಗಾಗಿ ಸಭಾಂಗಣಗಳ ಬಳಕೆ.

ಸಾಮಾಜಿಕ, ಧಾರ್ವಿುಕ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ವಿುಕ ಸಭೆಗಳನ್ನು ನಡೆಸಬಹುದು. ಸಭಾಂಗಣದ ಸಾಮರ್ಥ್ಯದ ಶೇ.50ರಷ್ಟು ಜನರು ಭಾಗವಹಿಸಬಹುದು.

ಮಾರ್ಗಸೂಚಿಗಳಲ್ಲೇನಿದೆ?

ಕಂಟೇನ್ಮೆಂಟ್ ವಲಯದಲ್ಲಿನ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಕಣ್ಗಾವಲು ವ್ಯವಸ್ಥೆ ಬಲಪಡಿಸಬೇಕು.

ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಗಳು ತಮ್ಮದೇ ನಿರ್ಬಂಧಗಳನ್ನು ವಿಧಿಸಬಹುದು.

ಹೊಸದಾಗಿ ರಚಿಸಬೇಕಾದ ಕಂಟೇನ್ಮೆಂಟ್ ವಲಯಗಳ ಪಟ್ಟಿಯನ್ನು ಸೂಚಿಸಲಾಗಿರುವ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು ಮತ್ತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮಾಹಿತಿ ನೀಡಬೇಕು.

ಕಂಟೇನ್ಮೆಂಟ್ ವಲಯದಲ್ಲಿ ಜನರ ಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಅಗತ್ಯ ಮತ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ಸೌಲಭ್ಯಗಳನ್ನು ಸ್ಥಗಿತಗೊಳಿಸಬೇಕು.

ಕಣ್ಗಾವಲು ತಂಡಗಳು ಕಂಟೇನ್ಮೆಂಟ್ ವಲಯದಲ್ಲಿ ಮನೆ ಮನೆಗೆ ಹೋಗಿ ಕರೊನಾ ಪರೀಕ್ಷೆ ನಡೆಸಬೇಕು. ಸೋಂಕಿತ ವ್ಯಕ್ತಿಯಿದ್ದರೆ ಅವರ ಜತೆ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಕ್ವಾರಂಟೈನ್ ಗೆ ಒಳಪಡಿಸಬೇಕು.

ಸೋಂಕಿತರನ್ನು ಅವರ ಮನೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಪ್ರಾರಂಭಿಸಬೇಕು. ಅಗತ್ಯವಿದ್ದಲ್ಲಿ ಆಸ್ಪತ್ರೆಗಳಿಗೂ ದಾಖಲಿಸಬಹುದು.

ಕಚೇರಿಗಳಲ್ಲಿ ದೈಹಿಕ ಅಂತರವನ್ನು ಅನುಸರಿಸಬೇಕು. ಶೇಕಡ 10 ಪಾಸಿಟಿವಿಟಿ ಇರುವ ನಗರಗಳಲ್ಲಿನ ಕಚೇರಿಗಳಲ್ಲಿನ ಸಮಯ ಬದಲಿಸಿ ಹೆಚ್ಚು ಜನರು ಒಮ್ಮೆಲೆ ಕೆಲಸ ನಿರ್ವಹಿಸದಂತೆ ಕ್ರಮ ಕೈಗೊಳ್ಳಬೇಕು.

ಡಿಸೆಂಬರ್ 1ರಂದು ಅಥವಾ ಅದಕ್ಕೂ ಮುನ್ನ ವೈದ್ಯಕೀಯ ಕಾಲೇಜ್ ಗಳ ಪುನರಾರಂಭಕ್ಕೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ.

Edited By : Nirmala Aralikatti
PublicNext

PublicNext

26/11/2020 10:38 pm

Cinque Terre

52.5 K

Cinque Terre

1

ಸಂಬಂಧಿತ ಸುದ್ದಿ