ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನ್ಯೂ ಇಯರ್ ಸೆಲೆಬ್ರೇಷನ್ ಗೆ ಕೊಕ್ಕೆ : ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗೆ ಹೋಗುವವರಿಗೆ ನಿರಾಸೆ

ಬೆಂಗಳೂರು : ಕೊರೊನಾ ಹವಾಳಿಯಿಂದ ಕಂಗೆಟ್ಟ ಸರ್ಕಾರ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಹೊಸ ಹೊಸ ರೂಲ್ಸ್ ಗಳನ್ನಾ ಜಾರಿ ಮಾಡುತ್ತಿದೆ.

ಹೌದು ಪ್ರತಿ ವರ್ಷ ಹೊಸ ವರ್ಷದ ದಿನದಿಂದ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳು ಯುವಜನತೆಯಿಂದ ಕಿಕ್ಕಿರಿದು ಜಮಾಯಿಸುತ್ತಿದ್ದರು.

ಆದರೆ, ಈ ವರ್ಷ ಅದಕ್ಕೆ ಅವಕಾಶ ನೀಡದಿರಲು ಬಿಬಿಎಂಪಿ ನಿರ್ಧರಿಸಿದೆ.

ಹೀಗಾಗಿ, ಹೊಸ ವರ್ಷಾಚರಣೆಗೆ ಎಂಜಿ ರಸ್ತೆ ಕಡೆಗೆ ಹೋಗುವ ಪ್ಲಾನ್ ರೂಸ್ ಆಗಲಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ. ಆದರೆ, ಕೊರೊನಾ ಟೆಸ್ಟ್ ಗೆ ಒಳಗಾದವರ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ನಿಖರವಾದ ಅಂಕಿ-ಅಂಶ ಲಭ್ಯವಾಗುತ್ತಿಲ್ಲ.

ಈಗಾಗಲೇ ಬೇರೆ ರಾಜ್ಯಗಳಲ್ಲಿ ಎರಡನೇ ಹಂತದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ.

ಹೀಗಾಗಿ, ಬೆಂಗಳೂರಿನಲ್ಲೂ ಮತ್ತಷ್ಟು ಉಲ್ಬಣಿಸದಿರಲಿ ಎಂದು ಮುನ್ನೆಚ್ಚರಿಕೆ ಕೈಗೊಂಡಿರುವ ಸರ್ಕಾರ ಮಾಸ್ಕ್, ಸಾಮಾಜಿಕ ಅಂತರ ಇತ್ಯಾದಿ ನಿಯಮಗಳನ್ನು ಜಾರಿಗೆ ತಂದಿದೆ.

ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಹೊಸ ವರ್ಷಾಚರಣೆಯನ್ನು ನಿಷೇಧಿಸಲಾಗಿದೆ.

Edited By : Nirmala Aralikatti
PublicNext

PublicNext

12/11/2020 02:06 pm

Cinque Terre

40.41 K

Cinque Terre

0

ಸಂಬಂಧಿತ ಸುದ್ದಿ