ಬೆಂಗಳೂರು: ಡೆಡ್ಲಿ ಸೋಂಕು ಎಂಟ್ರಿ ಕೊಟ್ಟಿದ್ದೆ ಕೊಟ್ಟಿದ್ದು ಜನ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳು ಸಾಕಷ್ಟು ಪ್ರಯತ್ನಗಳನ್ನಾ ಮಾಡುತ್ತಿದ್ದಾರೆ.
ಸದ್ಯ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಆಹಾರದ ಲಿಸ್ಟ್ ಇಲ್ಲಿದೆ ನೋಡಿ..
ಕೋವಿಡ್ -19 ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ಆಹಾರಗಳನ್ನು ಸೇವಿಸಲು ಸಲಹೆ ನೀಡಿದೆ.
ದ್ರಾಕ್ಷಿ ಹಣ್ಣು, ಕಿತ್ತಳೆ ಹಣ್ಣು,ಮೋಸಂಬಿ ಹಣ್ಣು, ನಿಂಬೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ವೃದ್ದಿಸಲಿದೆ ಎಂದು ಸಲಹೆ ನೀಡಲಾಗಿದೆ.
ಕೆಂಪು ದೊಣ್ಣೆ ಮೆಣಸಿನ ಕಾಯಿ, ಗೆಡ್ಡೆ ಕೋಸು, ಬೆಳ್ಳುಳ್ಳಿ, ಶುಂಠಿ ಕೂಡಾ ಆರೋಗ್ಯದಾಯಕ ಆಹಾರಗಳಾಗಿವೆ.
ಅದೇ ರೀತಿಯಲ್ಲಿ ಮೊಸರು, ಬಾದಾಮಿ, ಸೂರ್ಯಕಾಂತಿ ಬೀಜ, ನಿಂಬೆ ಕಾಯಿ, ಅರಿಶಿಣ, ಗ್ರೀನ್ ಟೀ, ಪಪ್ಪಾಯಿ ಮತ್ತು ಕಿವಿಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
PublicNext
10/10/2020 03:54 pm