ಹಾವೇರಿ: ಉತ್ತರ ಕರ್ನಾಟಕ ಭಾಗದಲ್ಲಿ ಈಗ ಗೌರಿ ಹುಣ್ಣಿಮೆ ಸಂಭ್ರಮ. ಗೌರಿ ಹುಣ್ಣಿಮೆ ಹಬ್ಬ ಅಂದ್ರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಹೆಣ್ಣು ಮಕ್ಕಳು ಸಕ್ಕರೆ ಬೊಂಬೆ ಕೋಲುಂಬರ ದಂಡಿ ಹಾಕಿಕೊಳ್ಳುವ ಮೂಲಕ ಗೌರಿ ಹುಣ್ಣಿಮೆ ಆಚರಿಸುತ್ತಾರೆ.
ಈ ಬೊಂಬೆಗಳು ತಯಾರಾಗುವುದು ಸಕ್ಕರೆಯಿಂದ. ಪ್ರತಿವರ್ಷ ಗೌರಿ ಹುಣ್ಣಿಮೆ ಪೂರ್ವದ ಒಂದು ವಾರ ಕಾಲ ಮಾರುಕಟ್ಟೆಯಲ್ಲಿ ಬೊಂಬೆಗಳ ಮಾರಾಟ ಭರಾಟೆಯಿಂದ ನಡೆಯುತ್ತೆ. ಸಕ್ಕರೆ ಬೊಂಬೆ ತಯಾರಕರು ವಾರಗಟ್ಟಲೆ ಸಕ್ಕರೆ ಬೊಂಬೆ ತಯಾರು ಮಾಡೋದ್ರಲ್ಲಿ ಬಿಜಿ ಆಗಿರ್ತಾರೆ.
ಪ್ರತಿದಿನ ಐದಾರು ಕ್ವಿಂಟಾಲ್ ಸಕ್ಕರೆಯಿಂದ ಬೊಂಬೆಗಳನ್ನು ತಯಾರಿಸಿ ಮಾರಾಟ ಮಾಡ್ತಾರೆ. ಸಕ್ಕರೆ, ಲಿಂಬೆ ಹಣ್ಣಿನ ರಸ, ಕಲರ್ ಕಲರ್ ಬಣ್ಣ ಬಳಸಿ ಸಕ್ಕರೆ ಬೊಂಬೆಗಳನ್ನು ತಯಾರಿಸ್ತಾರೆ. ವಾರಗಟ್ಟಲೆ ಅಚ್ಚುಗಳನ್ನಿಟ್ಟು ಸಕ್ಕರೆ ಬೊಂಬೆ ತಯಾರಿಸ್ತಾರೆ. ಶ್ರೀ ಗಣೇಶ ಆನೆ, ಒಂಟೆ, ಕುದುರೆ, ಬಸವಣ್ಣ ಹೀಗೆ ತರಹೇವಾರಿ ಆಕೃತಿಗಳ ಸಕ್ಕರೆ ಬೊಂಬೆ ತಯಾರು ಮಾಡ್ತಾರೆ. ಹೀಗೆ ತಯಾರಿಸಿದ ಬೊಂಬೆಗಳ ಜೊತೆ ಕೋಲುಂಬರ, ದಂಡಿ ಮಾರಾಟ ಮಾಡಲಾಗುತ್ತೆ.
PublicNext
16/11/2024 09:48 am