ಹಾವೇರಿ: ದಾಸಶ್ರೇಷ್ಠ ಕನಕದಾಸರ ಕರ್ಮಭೂಮಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಶ್ರೀ ಕನಕದಾಸರ ಜಯಂತಿ ಆಚರಿಸಲಾಯಿತು. ಕಳೆದೆರಡು ದಿನಗಳಿಂದ ಕಾಗಿನೆಲೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ರುದ್ರಾಭಿಷೇಕ, ಮಹಾರುದ್ರಾಭಿಷೇಕದ ಪೂಜೆ ಮಾಡುವ ಮೂಲಕ ಕನಕದಾಸರ ಜಯಂತಿ ಆಚರಿಸಲಾಯಿತು.
ಕನಕಗುರುಪೀಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಕನಕದಾಸರ ಆದರ್ಶಗಳು, ತತ್ವ ಸಿದ್ಧಾಂತಗಳನ್ನು ಜನತೆಗೆ ತಿಳಿಸಿದರು. ಪ್ರತಿವರ್ಷ ಕಾಗಿನೆಲೆಯಲ್ಲಿ ಕನಕದಾಸರ ಜಯಂತಿ ಆಚರಿಸಲಾಗುತ್ತಿದೆ.
ಸರಕಾರ ಕೂಡ ಕನಕದಾಸರ ಜಯಂತಿ ದಿನದಂದು ಸರಕಾರಿ ರಜೆ ಘೋಷಿಸಿ, ಕನಕದಾಸರ ಹಬ್ಬ ಆಚರಿಸಲು ಅನುಕೂಲ ಮಾಡಿಕೊಟ್ಟಿದೆ. ಎಲ್ಲ ಸರಕಾರಿ ಕಚೇರಿಗಳಲ್ಲಿ ಕನಕದಾಸರ ಭಾವಚಿತ್ರ ಹಾಕಿ ಜಯಂತಿ ಆಚರಣೆ ಮಾಡುತ್ತಿರುವುದು ಖುಷಿಯ ವಿಚಾರ ಎಂದು ಸ್ವಾಮೀಜಿ ಹೇಳಿದರು.
PublicNext
18/11/2024 10:32 pm