ಅರಸೀಕೆರೆ : ನಗರಸಭೆಯ ಕಾರ್ಯ ವೈಖರಿ ಖಂಡಿಸಿ ನಿಕಟಪೂರ್ವ ಅಧ್ಯಕ್ಷ ಗಿರೀಶ್, ಜೆಡಿಎಸ್ ಮು ಖಂಡ ಎನ್.ಆರ್.ಸಂತೋಷ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ನಗರಸಭೆ ಮುಖ್ಯದ್ವಾರದ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಸಮೀವುಲ್ಲಾ ಅವರು, ತಮ್ಮ ಆಣತಿಯಂತೆ ಅಧಿ ಕಾರಿಗಳನ್ನು ನಡೆಸಿಕೊಳ್ಳುವುದರ ಜತೆಗೆ ಮನಸೋ ಇಚ್ಛೆ ಸಾರ್ವ ಜನಿಕರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ತೆರಿಗೆ ಕಟ್ಟುವ ನಗರದ ಜನತೆಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರ ಹಾಕಿದರು.
PublicNext
20/01/2025 06:49 pm