ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: "ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಿದ ನಂತರವೇ ರಾಜಕೀಯ ನಿವೃತ್ತಿ"- ಹೆಚ್.ಡಿ. ರೇವಣ್ಣ ಇಂಗಿತ

ಹಾಸನ: ತಮ್ಮ ತಂದೆ ದೇವೇಗೌಡರಿಗೆ 1962ರಿಂದ ರಾಜಕೀಯ ಜನ್ಮ ನೀಡಿ ಶಕ್ತಿ ತುಂಬಿದ ಜಿಲ್ಲೆಯಲ್ಲಿ ಆಗದೇ ಉಳಿದಿರುವ ಯೋಜನೆ

ಪೂರ್ಣಗೊಳಿಸಿ, ಸಮಗ್ರ ಅಭಿವೃದ್ಧಿ ಮಾಡಿದ ನಂತರವೇ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ ಮಾಜಿ ಸಚಿವ ಹೆಚ್ .ಡಿ.ರೇವಣ್ಣ ಹೇಳಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ರಾಜಕೀಯವಾಗಿ ಹಲವು ಸ್ಥಾನಮಾನ, ಸಿಎಂ-ಪಿಎಂ ಆಗಲು ಹಾಸನ ಹಾಗೂ ಕನಕಪುರ ಲೋಕಸಭಾ ಕ್ಷೇತ್ರದ ಜನರೇ ಕಾರಣ ಎಂದರು. ದೇವೇಗೌಡರಲ್ಲದೆ, ನಾನು ಜೊತೆಗೆ ದಿ.ಪ್ರಕಾಶ್, ಈಗ ಸ್ವರೂಪ್ ಮೊದಲಾದವರು ಗೆಲ್ಲಲು ಜನರೇ ಕಾರಣರಾಗಿದ್ದಾರೆ. ಕೆಲವೊಮ್ಮೆ ಎಂಟಕ್ಕೆ ಎಂಟೂ ಈ ಸ್ಥಾನ ಗೆಲ್ಲಿಸಿದ್ದನ್ನು ನಾವು ಮರೆಯಲ್ಲ ಎಂದ ರೇವಣ್ಣ, ನನ್ನ ಕೊನೆ ಉಸಿರು ಇರೋವರೆಗೂ ಜಿಲ್ಲೆಯಲ್ಲಿ ಬಾಕಿ ಕೆಲಸ ಮುಗಿಸಲು ಸಿದ್ಧ ಎಂದು ಘೋಷಿಸಿದರು.

ಹಿಂದೆ ಕುಮಾರಸ್ವಾಮಿ ಮಾಡಿರುವುದರಲ್ಲಿ ಸ್ವಲ್ಪ ಬಾಕಿ ಇದೆ. ಯಾವುದೇ ಅಡೆತಡೆ ಬಂದರೂ ಪೂರ್ಣಗೊಳಿಸುವೆ. ಜಿಲ್ಲೆಯ ಜನರು ನೀಡಿರುವ ಸಹಕಾರ ಮರೆಯಲ್ಲ. ರಾಜ್ಯ ಸರ್ಕಾರ ಕೊಟ್ಟರೆ ಸಂತೋಷ, ಇಲ್ಲವಾದರೆ ಕೇಂದ್ರದ ನೆರವಿನಿಂದಲೇ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.

ಹಾಸನ, ಹೊಳೆನರಸೀಪುರದಲ್ಲಿ ರಿಂಗ್ ರೋಡ್ ಮಾಡಿಸಲು ಪ್ರಯತ್ನ ನಡೆಯುತ್ತಿದೆ. ಜಿಲ್ಲೆಗೆ ಏನೆಲ್ಲ ಆಗಬೇಕು ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

Edited By : Ashok M
PublicNext

PublicNext

14/01/2025 12:44 pm

Cinque Terre

33.64 K

Cinque Terre

0

ಸಂಬಂಧಿತ ಸುದ್ದಿ