ಹಾಸನ : ಅರಸೀಕೆರೆ ಶಾಸಕ ಕೆ ಎಂ ಶಿವಲಿಂಗೇಗೌಡ ಭೀಮನ ಪಾತ್ರದಲ್ಲಿ ಅಬ್ಬರಿಸಿ, ಬೊಬ್ಬಿರಿದಿದ್ದಾರೆ. ಅರಸೀಕೆರೆ ತಾಲೂಕಿನ ಗುತ್ತಿನಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ನಾಟಕದಲ್ಲಿ ಭೀಮನ ಪಾತ್ರದಲ್ಲಿ ಕಲೆಯನ್ನು ಶಿವಲಿಂಗೇಗೌಡ ಅನುಭವಿಸಿದರು. ಹೇ ಪಾಂಚಾಲಿ ಅಂತಾ ಗದೆ ಎತ್ತಿ ಶಿವಲಿಂಗೇಗೌಡ ಡೈಲಾಗ್ ಹೊಡೆದಿದ್ದಕ್ಕೆ ಜನರು ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟಿದರು.
ಗುತ್ತಿನಕೆರೆ ಶ್ರೀರಂಗನಾಥ ಸ್ವಾಮಿಯವರ ಬ್ರಹ್ಮರಥೋತ್ಸವ ಪ್ರಯುಕ್ತ ನಾಟಕವನ್ನು ಆಯೋಜಿಸಲಾಗಿತ್ತು. ನಾಟಕದಲ್ಲಿ ಭೀಮನಾಗಿ ಅಬ್ಬರಿಸುವುದಕ್ಕೂ ಮುನ್ನ ಕೆಎಂ ಶಿವಲಿಂಗೇಗೌಡ ರಾತ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಿವಲಿಂಗೇಗೌಡ ರಂಗನಾಥಸ್ವಾಮಿ ದರ್ಶನ ಪಡೆದರು.
PublicNext
17/01/2025 03:07 pm