ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬೆಳಗಾವಿ ನಗರದ ಜಾಧವ್ ನಗರದಲ್ಲಿ ಕಂಡು ಬಂದಿದ್ದ ಚಿರತೆ ನಗರದ ಜನರನ್ನು ಬೆಚ್ಚಿ ಬಿಳಿಸಿತ್ತು. ಆ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸತತವಾಗಿ ವಿವಿಧ ರೀತಿಯ ಆಪರೇಷನ್ ವಿಧಾನಗಳನ್ನು ಬಳಸಿದ್ದರು. ಆದರೂ ಚಿರತೆ ಮಾತ್ರ ಅರಣ್ಯ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತ ನಿತ್ಯ ಇಲಾಖೆ ಸೇರಿದಂತೆ ನಗರದ ಸ್ಥಳೀಯರ ನಿದ್ದೆಗೆಡಿಸಿತ್ತು.
ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲಾಡಳಿತ ಕಳೆದ ನಾಲ್ಕು ದಿನಗಳ ಹಿಂದೆ ಚಿರತೆ ಸೆರೆ ಸಿಗುವವರಿಗೂ ೨೨ ಶಾಲೆಗಳಿಗೆ ರಜೆ ನೀಡಿತ್ತು. ಇದೀಗ ಚಿರತೆ ಹಾವಳಿ ನಗರದಲ್ಲಿ ಅಷ್ಟೇ ಅಲ್ಲ ಮೂಡಲಗಿ ಪ್ರದೇಶದಲ್ಲೂ ಪ್ರತ್ಯಕ್ಷವಾಗಿದೆ. ನಿನ್ನೆ ರಾತ್ರಿ ಮೂಡಲಗಿಯ ಧರ್ಮಟ್ಟಿಯ ಗ್ರಾಮದ ಅನಿಲ್ ಎಂಬುವರ ಮನೆಯ ತೋಟದಲ್ಲಿದ್ದ ಮೇಕೆಯನ್ನು ಹೊತ್ತುಕೊಂಡು ಹೋಗಿದೆ. ಹೀಗಾಗಿ ಈಗ ಮತ್ತೆ ಜಿಲ್ಲಾಡಳಿತ ಮೂಡಲಗಿಯ ಸುತ್ತಮುತ್ತಲಿನ ೩೦ ಶಾಲೆಗಳಿಗೆ ರಜೆ ಘೋಷಿಸಿದೆ. ಒಂದು ಚಿರತೆ ಹಾವಳಿ ತಡೆಯಲಾರದ ಜಿಲ್ಲಾಡಳಿತಕ್ಕೆ ಇದೀಗ ಮೂಡಲಗಿಯಲ್ಲಿ ಕಂಡುಬಂದ ಮತ್ತೊಂದು ಚಿರತೆಯಿಂದ ಮತ್ತಷ್ಟು ತಲೆ ಬಿಸಿ ಹೆಚ್ಚಾಗಿದೆ.
PublicNext
12/08/2022 03:30 pm