ಪಾಕಿಸ್ತಾನದ ಸದ್ಯದ ಪರಿಸ್ಥಿತಿ ನೋಡಿದ್ರೆ ಕರುಳು ಹಿಂಡಿದಂತಾಗುತ್ತದೆ. ತುತ್ತು ಅನ್ನಕ್ಕಾಗಿ ಪುಟ್ಟ ಕಂದಮ್ಮಗಳು ಪರಿತಪಿಸುತ್ತಿವೆ.
ಅನಿರೀಕ್ಷಿತ ಪ್ರವಾಹ ಪರಿಸ್ಥಿತಿ ವಿಕೋಪ ತಲುಪಿದೆ. ವಿನಾಶಕಾರಿ ಪ್ರವಾಹದಿಂದಾಗಿ ಲಾಹೋರ್ ಮತ್ತು ಪಂಜಾಬ್ ಪ್ರಾಂತ್ಯದ ಇತರ ಭಾಗಗಳಲ್ಲಿ ವಿವಿಧ ತರಕಾರಿಗಳು ಮತ್ತು ಹಣ್ಣುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ.
ಸದ್ಯ ಅಲ್ಲಿಯ ಪರಿಸ್ಥಿತಿ ನೋಡಿದ ಪ್ರಧಾನಿ ಮೋದಿ ನನ್ನ ಹೃದಯ ಭಾರವಾಗಿದೆ. ಅಲ್ಲಿನ ಪರಿಸ್ಥಿತಿ ಶೀಘ್ರ ಸುಧಾರಿಸಲಿ ಎಂದು ಹೇಳಿದ್ದಾರೆ. ಇತಿಹಾಸದ ಅತ್ಯಂತ ಭೀಕರ ಪ್ರವಾಹ ಪರಿಸ್ಥಿತಿಗೆ ಸಿಲುಕಿರುವ ಪಾಕಿಸ್ತಾನದ ಬಗ್ಗೆ ಭಾರತ ಸರ್ಕಾರದ ಪರವಾಗಿ ಇದೇ ಮೊದಲ ಬಾರಿಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ, ಜನರ ನೋವಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನಕ್ಕೆ ಅಗತ್ಯ ಮಾನವೀಯ ನೆರವು ಒದಗಿಸುವ ಉದ್ದೇಶದಿಂದ ಪಾಕ್ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಒಂದು ವೇಳೆ ಭಾರತದ ಪ್ರಸ್ತಾವಕ್ಕೆ ಪಾಕಿಸ್ತಾನವು ಸಕಾರಾತ್ಮಕವಾಗಿ ಸ್ಪಂದಿಸಿದರೆ, ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗದಿದ್ದರೆ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನಕ್ಕೆ ಒದಗಿಸುತ್ತಿರುವ ಮೊದಲ ನೆರವು ಇದಾಗಲಿದೆ.
ಈ ಹಿಂದೆ 2005 ಮತ್ತು 2010ರಲ್ಲಿ ಪಾಕಿಸ್ತಾನವು ಪ್ರವಾಹದಿಂದ ಕಂಗಾಲಾಗಿದ್ದಾಗ ಭಾರತದಿಂದ ಮಾನವೀಯ ನೆರವು ಅಲ್ಲಿನ ಜನರಿಗೆ ಆಸರೆಯಾಗಿತ್ತು. ಆಗ ಯುಪಿಎ ಮೈತ್ರಿಕೂಟ ಅಧಿಕಾರದಲ್ಲಿತ್ತು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಪ್ರಧಾನಿ ಶೆಹ್ಬಾಜ್ ಷರೀಫ್ ಜಾಗತಿಕ ಸಮುದಾಯದ ನೆರವು ಕೋರಿದ್ದಾರೆ.
'ಭಾರತದಿಂದ ಆಹಾರ ಧಾನ್ಯ, ತರಕಾರಿ ಮತ್ತಿತರ ಆಹಾರ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಕುರಿತು, ನೆರವು ಕೋರಲು ಚಿಂತನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನವು ಭಾರತದಿಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು, ಶಾಂತಿ ಕಾಪಾಡಲು ಮುಂದಾಗಿರುವ ಕುರಿತು ಆಗಾಗ ಹೇಳಿಕೆಗಳನ್ನು ನೀಡಿ ಗಮನ ಸೆಳೆಯುತ್ತಿದೆ.
PublicNext
30/08/2022 05:57 pm