ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಪ್ರಧಾನಿ ಮೋದಿ ಜನ್ಮದಿನ: ಕಾರ್ಯಕರ್ತರಿಂದ ಒಂದು ಸಾವಿರ ಬ್ಲಡ್ ಯುನಿಟ್ ಸಂಗ್ರಹದ ಗುರಿ

ಗದಗ: ದೇಶದ ಪ್ರಧಾನಿ ನರೇಂದ್ರ ಮೋದಿಯವರ 73 ನೇ ಜನ್ಮದಿನ, ದೀನದಯಾಳ ಉಪಾಧ್ಯಾಯ, ಮಹಾತ್ಮಗಾಂಧಿ ಹಾಗೂ ಲಾಲ ಬಹದ್ದೂರ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಇದೇ ಸೆ.17 ರಿಂದ ಅ.2 ವರೆಗೆ ರಕ್ತದಾನ, ಸಸಿ ನೆಡುವ, ಸ್ವಚ್ಚತಾ ಅಭಿಯಾನ ಹಾಗೂ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವರಾಜಗೌಡ ಹಿರೇಮನಿ ಪಾಟೀಲ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಅವರ ಜನ್ಮದಿನದ ಅಂಗವಾಗಿ ಮಂಡಳ, ಜಿಲ್ಲಾ ಹಾಗೂ ರಾಜ್ಯಾದ್ಯಂತ ರಕ್ತದಾನ ಶಿಬಿರ ಜರುಗಲಿದ್ದು, ಜಿಲ್ಲೆಯ 6 ಸ್ಥಳಗಳಲ್ಲಿ 9 ಮಂಡಲದ ಕಾರ್ಯಕರ್ತರಿಂದ ಒಂದು ಸಾವಿರ ಬ್ಲಡ್ ಯುನಿಟ್ ಸಂಗ್ರಹದ ಗುರಿಯನ್ನು ಹೊಂದಲಾಗಿದೆ. ಅದೇ ರೀತಿ ಸೆ. 18 ರಂದು ಮೂರು ಸ್ಥಳಗಳಲ್ಲಿ ರಕ್ತದಾನದ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸಚಿವ ಸಿ.ಸಿ.ಪಾಟೀಲ, ಶಾಸಕರುಗಳಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ ಸೇರಿದಂತೆ ಇತರೆ ನಾಯಕರುಗಳು ಭಾಗವಹಿಸುವರು ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಹುಲ್ ಅರಳಿ, ಸಿದ್ರಾಮೆಶ್ವರ ಹಿರೇಮಠ, ವೆಂಕಟೇಶ ಹಬೀಬ, ಕಿರಣ ಕಲಾಲ, ಕುಮಾರ ಮಾರನಬಸರಿ, ಸಂತೋಷ ಹುಬ್ಬಳ್ಳಿ, ಸಿದ್ದೇಶ ಹೂಗಾರ ಸೇರಿದಂತೆ ಮುಂತಾದವರು ಇದ್ದರು.

Edited By :
PublicNext

PublicNext

16/09/2022 09:13 pm

Cinque Terre

30.81 K

Cinque Terre

2

ಸಂಬಂಧಿತ ಸುದ್ದಿ