ಗದಗ: ನಮ್ಮಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಸಿಎಂ ಬೊಮ್ಮಾಯಿ ಹೇಳಿಕೆಗೆ ಶಾಸಕ ಯತ್ನಾಳ ವ್ಯಂಗ್ಯವಾಗಿ ಮಾತನಾಡಿದರು.
ಗದಗ ನಗರದ ಹಿಂದೂ ಮಹಾಗಣಪತಿ ಕಾರ್ಯಕ್ರಮದಲ್ಲಿ ಮಾತನಾಡಿದ ಯತ್ನಾಳ್, ಹಾಡುಹಗಲೇ ಹಿಂದೂಗಳ ಹತ್ಯೆ ಮಾಡುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಆದರೂ ಪೊಲೀಸರಿಗೆ ಹೊಡೆಯುವ ಹಕ್ಕಿಲ್ಲ ಎಂದು ನಮ್ಮವರು ಹೇಳುತ್ತಾರೆ. ಅದೇ ನಾನು ಸಿಎಂ ಇದ್ದಿದ್ದರೆ ಹೊಡೆದು ಬಿಸಾಕಿ ಎಂದು ಹೇಳುತ್ತಿದ್ದೆ. ಕರ್ನಾಟಕ ರಾಜ್ಯದಲ್ಲಿ ಎನ್‌ಕೌಂಟರ್ ಸ್ಪೆಷಾಲಿಟಿ ಇಡುತ್ತಿದ್ದೆ. ಯತ್ನಾಳ ಪ್ರಶ್ನೆಗೆ ಉತ್ತರ ಕೊಡಲ್ಲ ಅಂತಾರೆ. ಯತ್ನಾಳ ಯೋಗಿ ಆಗ್ತಾನೆ ಅಂತಾ ಅವ್ರಿಗೆ ಭಯವಿದೆ. ಎಲ್ಲವೂ ಮಿಲಾಪಿ ರಾಜಕಾರಣ ಅಂತ ಕಿಡಿಕಾರಿದರು. ಮುಂದೆ ನಾ ಮುಖ್ಯಮಂತ್ರಿ ಆದ್ರೆ ನಾವು ನೀವು ಎಲ್ಲರೂ ಕುಣಿಯೋಣ ಎಂದು ಹೇಳಿದರು.
PublicNext
19/09/2022 11:51 am