ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಜೇಂದ್ರಗಡ ಪಟ್ಟಣದಲ್ಲಿ ಆಪ್ ಪಕ್ಷದ ಕಾರ್ಯಾಲಯ ಉದ್ಘಾಟನೆ

ಗದಗ : ವಿಧಾನಸಭೆ ಚುನಾವಣೆಗೆ ಗದಗ ಜಿಲ್ಲೆ ರೋಣ ಮತ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಸಂಘಟನಾತ್ಮಕ ಸಿದ್ಧತೆ ಮಾಡಿಕೊಳ್ಳುತ್ತಿದೆ‌. ಗಜೇಂದ್ರಗಡ ಪಟ್ಟಣದಲ್ಲಿ ಆಪ್ ಪಕ್ಷದ ಕಾರ್ಯಾಲಯ ಉದ್ಘಾಟನೆಯಲ್ಲಿ ತನ್ನ ಬಲಾಬಲ ತೋರಿಸುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ‌.

ರಾಜ್ಯದಲ್ಲಿ ಚುನಾವಣಾ ಸಮೀಪಿಸುತ್ತಿರುವಾಗಲೇ ಗದಗ ಜಿಲ್ಲೆಯಲ್ಲಿ ಈಗಿನಿಂದಲೇ ಚುನಾವಣಾ ಖಾವು ಏರತೊಡಗಿದೆ. ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಆಮ್ಆದ್ಮಿ ಪಕ್ಷದ ಪ್ರಚಾರದ ಅಬ್ಬರ ಜೋರಾಗಿತ್ತು. ರೋಣ ಕ್ಷೇತ್ರಕ್ಕೆ ಆಪ್ ಪಕ್ಷಕ್ಕೆ ಆನೇಕಲ್ ದೊಡ್ಡಯ್ಯ ಅಭ್ಯರ್ಥಿಯಾಗಿದ್ದು, ಬಿಜೆಪಿ ಶಾಸಕ ಕಳಕಪ್ಪ ಬಂಡಿಗೆ ಟಕ್ಕರ್ ಕೊಡಲು ಗಜೇಂದ್ರಗಡ ಪಟ್ಟಣದಲ್ಲಿ ಬೃಹತ್ ರ‌್ಯಾಲಿ ನಡೆಸಿದ್ರು. ಪಟ್ಟಣದ ಜಿಟಿಡಿ ಕಲ್ಯಾಣ ಮಂಟಪ ದಿಂದ ಆರಂಭಗೊಂಡ ಬೃಹತ್ ಮೆರವಣಿಗೆ ಕಾಲಕಾಲೇಶ್ವರ ವೃತ್ತದ ಮೂಲಕ ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿರುವ ಆಪ್ ಕಾರ್ಯಾಲಯ ದವರೆಗೂ ಸಂಚರಿಸಿತು.

ಮೆರವಣಿಗೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ ಜನ ಮನ ಸೆಳೆಯಿತು. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಆಪ್ ಕಾರ್ಯಾಲಯ ಉದ್ಘಾಟನೆ ವೇಳೆ ರೋಣ ಕ್ಷೇತ್ರದ ಬಹುತೇಕ ಗ್ರಾಮಗಳಿಂದ ಆಗಮಸಿದ ಆಮ್ ಆದ್ಮಿ ಕಾರ್ಯಕರ್ತರ ತೆಲೆಯ ಮೇಲೆ ಹಾಕಲಾದ ಆಪ್ ಟೋಪಿ ಗಮನ ಸೆಳೆಯಿತು.

Edited By : PublicNext Desk
Kshetra Samachara

Kshetra Samachara

11/10/2022 08:24 pm

Cinque Terre

8.06 K

Cinque Terre

0