ಗದಗ: ತಾಲೂಕಿನ ಮುಳಗುಂದ ಮಹ್ಮದ ಪೈಗಂಬರರ ಜಯಂತಿ ಅಂಗವಾಗಿ ನಡೆಯುವ ಈದ್ ಮಿಲಾದ್ ಹಬ್ಬದ ಹಿನ್ನೆಲೆ ಸ್ಥಳೀಯ ಪೊಲೀಸ್ ಠಾಣೆ ಆವರಣದಲ್ಲಿ ಶಾಂತಿ ಪಾಲನ ಸಭೆ ಗುರುವಾರ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಪಿಐ ಅಶೋಕ ಸದಲಗಿ ಮಾತನಾಡಿ, ಅಹಿತಕರ ಘಟನೆಗ ಅವಕಾಶ ನೀಡದಂತೆ ಹಬ್ಬ ಆಚರಿಸಿ, ಮೆರವಣಿಗೆ ಮಾಡುವವರು ಮುಂಚಿತವಾಗಿ ಪರವಾನಿಗೆ ತೆಗೆದುಕೊಳ್ಳುವದು ಕಡ್ಡಾಯವಾಗಿದೆ. ಸರ್ಕಾರ ವಿಧಿಸಿರುವ ಷರತ್ತುಗಳಿಗೆ ಒಳಪಟ್ಟು ಮೆರವಣಿಗೆ ಮಾಡಬೇಕು. ಕಾನೂನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಜರುಗಿಸುತ್ತೇವೆ. ಶಾಂತಿ ಸುವ್ಯವಸ್ಥೆ ಕಪಾಡುವಲ್ಲಿ ಪೊಲೀಸ್ ಇಲಾಖೆಗೆ ಸಮುದಾಯಗಳ ಮುಖಂಡರ ಸಹಕಾರ ಅಗತ್ಯವಾಗಿದೆ.ಎಂದರು.
ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಇಮಾಮಸಾಬ ಶೇಖ,ಸದಸ್ಯರಾ ಎ.ಡಿ.ಮುಜಾವರ,ಆರ್.ಎಚ್.ದಲೀಲ,ಹೈದರಲಿ ಖವಾಸ,ಮನ್ಸೂರ ಹಣಗಿ,ಎ.ಎಂ.ಹುಬ್ಬಳ್ಳಿ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ಸುಂಕಾಪೂರ,ಸೊರಟೂರ ಗ್ರಾ.ಪಂ ಅಧ್ಯಕ್ಷ ಮೈಬೂಸಾಬ ಯಕ್ಲಾಸಪೂರ, ಮುಖಂಡರಾದ ಅಶೋಕ ಹುಣಸಿಮರದ,ಎಸ್.ಸಿ.ಬಡ್ನಿ,ನೂರಹ್ಮದ ಮುಜಾವರ,ಪೀರಸಾಬ ಶೇಖ,ದಾವುದ ಜಮಾಲಸಾಬನವರ,ಮುನ್ನಾ ಡಾಲಯತ್ ಹಾಗೂ ಪೊಲೀಸ್ ಸಿಬ್ಬಂದಿ ಮೊದಲಾದವರು ಇದ್ದರು.
Kshetra Samachara
07/10/2022 09:22 am