ಗದಗ: ತಾಲೂಕಿನ ಮುಳಇಲ್ಲಿನ ಕೃಷಿ ಇಲಾಖೆಯ ರಿಯಾಯತಿ ದರದ ಬೀಜ ವಿತರಣಾ ಕೇಂದ್ರದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನ ಕೃಷಿ ಸಹಾಯಕ ಅಧಿಕಾರಿ ಎಫ್.ಸಿ. ಗುರಿಕಾರ ರೈತರಿಗೆ ಶನಿವಾರ ವಿತರಿಸಿದರು.
ನಂತರ ಮಾತನಾಡಿದ ಅವರು ಪಟ್ಟಣ ಸೇರಿದಂತೆ ಕಣವಿ, ಹೊಸೂರು, ಹರ್ತಿ, ಚಿಂಚಲಿ, ನೀಲಗುಂದ, ಕಲ್ಲೂರು,ಬಸಾಪೂರ ಹಾಗೂ ಸೀತಾಲಹರಿ ಗ್ರಾಮಗಳ ವ್ಯಾಪ್ತಿಯ ಒಟ್ಟು 5500 ಹೆಕ್ಟರ್ ಭೂಮಿಯಲ್ಲಿ ಹಿಂಗಾರು ಬಿತ್ತನೆ ಗುರಿ ಇದೆ. ಇದಕ್ಕಾಗಿ ಸ್ಥಳೀಯ ಕೇಂದ್ರದಲ್ಲಿ 80 ಕ್ವಿಂಟಲ್ ಕಡಲೆ, 10.20 ಕ್ವಿಂಟಲ್ ಜೋಳ, 2 ಕ್ವಿಂಟಲ್ ಕುಸುಬಿ, ಬೀಜೋಪಚಾರಕ್ಕೆ 4 ಕ್ವಿಂಟಲ್ ಟ್ರೈಕೋಡರ್ಮಾ, ಮೈಕ್ರೋ ಮ್ಯಾಜಿಕ್ ಟಾನಿ 200 ಲಿ ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ ಕಾರ್ಡ ಕೊಟ್ಟು ರಿಯಾಯತಿ ದರದಲ್ಲಿ ಖರೀದಿಸಬಹುದು. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ದೇವರಾಜ ಸಂಗನಪೇಟಿ, ಮಂಜುನಾಥ ಕಬಾಡಿ, ನಜೀರ ಅಜಂಖಾನವರ, ಇಮಾಮುಹುಸೇನ ನದ್ದೀಮುಲ್ಲಾ, ಪ್ರಶಾಂತ ಹುಲಕೋಟಿ,ಶಂಕ್ರಯ್ಯ ಹಿರೇಮಠ, ಬೀಜ ವಿತರಣಾ ಕೇಂದ್ರದ ಸಹಾಯಕ ಖಾಸೀಮ ಹಾದಿಮನಿ, ಮಂಜುನಾಥ ಕರಿಗಾರ ಇದ್ದರು.
ಮುಳಗುಂದ ಕೃಷಿ ಇಲಾಖೆಯಿಂದ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನ ಕೃಷಿ ಸಹಾಯಕ ಅಧಿಕಾರಿ ಎಫ್.ಸಿ. ಗುರಿಕಾರ ರೈತರಿಗೆ ವಿತರಿಸಿದರು.
Kshetra Samachara
02/10/2022 11:17 am