ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸರ್ಕಾರಿ ಪದವಿ ಪೂರ್ವ ಕಾಲೇಜ್ ಮುಂಡರಗಿಯ ಎನ್ ಎಸ್ ಎಸ್ ವಿಶೇಷ ಶಿಬಿರ

ಗದಗ: ಸರ್ಕಾರಿ ಪದವಿ ಪೂರ್ವ ಕಾಲೇಜ್ ಮುಂಡರಗಿಯ ಎನ್ ಎಸ್ ಎಸ್ ವಿಶೇಷ ಶಿಬಿರವನ್ನು‌ ಮಕ್ತುಂಪುರ ಗ್ರಾಮದಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ಎಸ್ ವಿ ಪಾಟೀಲ್ ಮುಖಂಡರು ಮುಂಡರಗಿ ರವರು ಉದ್ಘಾಟನೆ ನೆರವೇರಿಸಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ ಬಹುಪಯೋಗಿ ಕಾರ್ಯಕ್ರಮವಾಗಿದೆ. ದತ್ತು ಗ್ರಾಮದಲ್ಲಿ ವಿದ್ಯಾರ್ಥಿ ಸ್ವಯಂಸೇವಕರು ಶಿಕ್ಷಣ, ಆರೋಗ್ಯ, ಸೇವೆ, ಜನಜಾಗೃತಿ ಹಾಗೂ ಸ್ವಚ್ಚತೆಯ ಮಹತ್ವದ ಕುರಿತು ಜನರಿಗೆ ತಿಳಿಸುವುದರ ಜೊತೆಗೆ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಶಿಸ್ತು, ಸೇವಾಗುಣ ಹೊಂದಿ ಏಕತೆಯನ್ನು ಸಾಧಿಸಲು ಈ ಸೇವಾ ಯೋಜನೆ ಸಹಕಾರಿ ಆಗಲಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಜುನಾಥ ಇಟಗಿ ಮಾತನಾಡಿ, ವಿದ್ಯಾರ್ಥಿಗಳು ಈ ಸೇವಾ ಯೋಜನೆಯಿಂದ ಸಮಯ ಹೊಂದಾಣಿಕೆ ಹಾಗೂ ನಾಯಕತ್ವ ಗುಣ ಕಲಿಯಲು ಸಾಧನವಾಗಿದೆ.ಜೀವನದ ಮೌಲ್ಯವನ್ನು ತಿಳಿಕೋಳ್ಳವ ಜೊತೆಗೆ ದೇಶದ ಉತ್ತಮ ನಾಗರಿಕನಾಗಿ ಬೆಳೆಯಲು ಪೂರಕ ಜ್ಞಾನ ವಿದ್ಯಾರ್ಥಿಗಳಿಗೆ ಸಿಗಲಿದೆ,ಮುಕ್ತುಂಪುರ ಗ್ರಾಮದ ಹಿರಿಯರ,ಯುವಕರ ಸಹಕಾರದಿಂದ ಏಳು ದಿನಗಳ ರಾಷ್ಟ್ರೀಯ ಸೇವಾ ಯೋಜನೆ ಯಶಸ್ವಿಯಾಗಿ ನಡೆಯಲಿದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಸದಸ್ಯರಾದ ಅಂದಪ್ಪ ತಿಪ್ಪಣ್ಣನವರ ಅವರು ವಹಿಸಿಕೊಂಡಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಂಎಫ್ ಬಾರ್ಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಂಡರಗಿ, ಶ್ರೀ ಯಲ್ಲಪ್ಪ ಗಣಾಚಾರಿ, ಸಿರಸಮ್ಮ ಪೂಜಾರ,ಎಸ್ ಡಿ ಎಂ ಸಿ ಅಧ್ಯಕ್ಷರಾದ ರಫೀಕ್ ಎಂ ಮಕಾಂದಾರ್, ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಶ್ರೀಮತಿ ಜಯಲಕ್ಷ್ಮಿ ಬಸವರಾಜ ಕುರಹಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಕೆ ಎಸ್ ತಜಮುಲ್ ಅಹಮದ್ , ಬಿ.ಜಿ ನಾಡಗೌಡ ಉಮೇಶ್ ಮುಳಗುಂದ ಶಿಬಿರಾಧಿಕಾರಿ ಮೆಗೇರಿ ಆನಂದ ರೆಡ್ಡಿ ಅವರು ಉಪಸ್ಥಿತರಿದ್ದರು.

ಉಪನ್ಯಾಸಕರಾದ ಎ.ಎಂ.ಗೌಡರ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಯುವರಾಜ ರಾಮೇನಹಳ್ಳಿ ಕೊನೆಗೆ ವಂದಸಿದರು.

Edited By : PublicNext Desk
Kshetra Samachara

Kshetra Samachara

26/09/2022 08:25 pm

Cinque Terre

5.2 K

Cinque Terre

0