ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಹಾವುಗಳನ್ನು ಹಿಡಿಯುವ ಸಾಹಸಿ ಸಾಗರ ಧರಣಿ

ಹಾವು ಎಂದರೆ ಸಾಕು ಎಂಥವರಿಗೂ ಭಯ ಆಗತ್ತೆ ನಾವೇನಾದರೂ ಹಾವು ಇಲ್ಲೇ ಇದೆ ಎಂದರೆ ಸಾಕು ಓಡಿ ಹೋಗುತ್ತೇವೆ, ಇನ್ನೂ ಹಾವು ಕಣ್ಣ ಮುಂದೆ ಇತ್ತು ಅಂದ್ರೆ ಮಾರುದ್ಧ ಓಡುತ್ತೇವೆ. ಜನರು ಕೂಡಿದರೆ ಸಾಕು ಹೊಡೆದು ಬಿಡುತ್ತಾರೆ ಹೀಗೆ ಹಾವುಗಳು ಕಂಡ್ರೆ ಭಯ ಪಡುವ ಜನರ ಮಧ್ಯೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಾವುಗಳು ಕಂಡ್ರೆ ಹಿಡಿದು ಊರಿನ ಹೊರಗಡೆ ಕಾಡಿನ ಕಡೆ ಬಿಟ್ಟು ಬರುತ್ತಾನೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಸಾಗರ ಧರಣಿ ಅವರು ಕಳೆದ ಹಲವು ವರ್ಷಗಳಿಂದ ಉರಗ ರಕ್ಷಣೆಯಲ್ಲಿ ತೊಡಗಿದ್ದು, ಜನರಲ್ಲಿದ್ದ ಭಯವನ್ನು ದೂರ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಹಾವು ಕಂಡರೆ ಯಾವುದೇ ಪ್ರಾಣಿ ಪಕ್ಷಿಗಳು ಕಂಡರೆ ಅವುಗಳನ್ನು ಕೊಲ್ಲದೆ ರಕ್ಷಣೆ ಮಾಡಬೇಕೆಂದು ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುತ್ತಿದ್ದಾರೆ.

ಸದಾ ಹಾವಿನ ಜತೆ ಇರುವ ಇವರು ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ಮನೆಯಲ್ಲಿ ಬಂದ ವಿವಿಧ ಜಾತಿಯ ಹಾವುಗಳನ್ನು ಹಿಡಿದು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡುವ ಕೆಲಸ ಮಾಡತ್ತಿದ್ದಾರೆ.

ಡಿಪ್ಲೋಮಾ ಟೋಲ್ ಆ್ಯಂಡ್ ಟೈ ಮೇಕಿಂಗ್ ವಿದ್ಯಾಭ್ಯಾಸ ಮಾಡಿದ್ದು 2008 ರಲ್ಲಿ ಪಿಯುಸಿ ಇರುವಾಗಲೇ ನಾಗರಹಾವು ಗಳನ್ನು ಹಿಡಿದು ಅರಣ್ಯ ಪ್ರದೇಶಗಳಲ್ಲಿ ಬಿಟ್ಟು ಬರುತ್ತಿದ್ದರು.

ಸದ್ಯ ಪಟ್ಟಣದ ಸಾಲೇಶ್ವರ ಪತ್ತಿನ ಸಹಕಾರ ಬ್ಯಾಂಕ್ ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಇವರು ಯಾವುದೇ ಸಮಯದಲ್ಲಿಯಾದರೂ ಹಾವು ಇದೆ ಎಂದರೆ ಆ ಸ್ಥಳಕ್ಕೆ ದೌಡಾಯಿಸಿ ಹಾವುಗಳನ್ನು ಹಿಡಿಯುತ್ತಾರೆ ಹಾಗೇ ಹಿಡಿದ ಹಾವುಗಳನ್ನು ಹಿಂಸೆ ಮಾಡದೆ ನಗರದ ಅರಣ್ಯ ಪ್ರದೇಶಗಳಲ್ಲಿ ಬಿಟ್ಟು ಬರುತ್ತಾರೆ.

Edited By :
PublicNext

PublicNext

14/09/2022 07:41 pm

Cinque Terre

39.5 K

Cinque Terre

0

ಸಂಬಂಧಿತ ಸುದ್ದಿ