ಗದಗ: ಮುಂಡರಗಿ ತಾಲೂಕಿನ ನಾಗರಹಳ್ಳಿ ಮತ್ತು ಬೆಣ್ಣಿಹಳ್ಳಿ ಮಾರ್ಗ ಮಧ್ಯದಲ್ಲಿರುವ ಹಿರೇ ಹಳ್ಳದಲ್ಲಿ ನಾಗರಹಳ್ಳ ಗ್ರಾಮದ ಮಲ್ಲಪ್ಪ ನಾಗಪ್ಪ ಹಲವಾಗಲಿ ಎಂಬುವರ ಟ್ಯಾಕ್ಟರ್ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಯದಿಂದ ಪಾರಾಗಿದ್ದಾನೆ.
ಗ್ರಾಮಸ್ಥರು ಜೆ.ಸಿ.ಬಿ ಮೂಲಕ ಟ್ಯಾಕ್ಟರ್ ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು. ಸುಮಾರು ವರ್ಷಗಳಿಂದ ಪ್ರಯಾಣಿಕರ ಪ್ರಾಣಕ್ಕೆ ಕಂಟಕವಾಗಿರುವ ಈ ಹಳ್ಳದಲ್ಲಿ ಬೈಕ್, ಟ್ರ್ಯಾಕ್ಟರ್, ಕೊಚ್ಚಿಕೊಂಡು ಹೋಗಿವೆ.
ತಾಲೂಕಿನ ಇಬ್ಬರು ಪೊಲೀಸರು ಈಗಾಗಲೇ ಹಳ್ಳದಲ್ಲಿ ಕೊಚ್ಚಿ ಹೋಗಿದ್ದು ಇಷ್ಟಾದರೂ ಇಂತಹ ಹಳ್ಳಗಳಿಗೆ ಸೇತುವೆ ನಿರ್ಮಿಸುತ್ತಿಲ್ಲ. ನಾಗರಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಬೆಣ್ಣಿಹಳ್ಳಿ ಮತ್ತು ಮತ್ತುಂಪುರ್ ಗ್ರಾಮದ ಮಕ್ಕಳು ಇದೇ ಹಳ್ಳ ದಾಟಿ ಶಾಲೆಗೆ ಬರಬೇಕಿದೆ.
ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಲು ಭಯ ಪಡುತ್ತಿದ್ದಾರೆ. ಈಗಲಾದರೂ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ಸೇತುವೆ ನಿರ್ಮಾಣ ಮಾಡಬೇಕೆಂಬುದು ಜನರ ಆಗ್ರಹವಾಗಿದೆ.
Kshetra Samachara
12/10/2022 04:39 pm