ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ರಸ್ತೆ‌ ಕಾಮಗಾರಿ ವೇಳೆ ಒಡೆದ ಪೈಪ್ ಕಾರಂಜಿಯಂತೆ ಚಿಮ್ಮುತ್ತಿರುವ ಕುಡಿಯುವ ನೀರು

ಗದಗ: ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗಿರುವ ಘಟನೆ ಗದಗ ನಗರದ ದೋಬಿ ಘಾಟ್ ಬಳಿ ನಡೆದಿದೆ. ಗದಗ ಲಕ್ಷ್ಮೇಶ್ವರ ರಸ್ತೆ ಕಾಮಗಾರಿ ವೇಳೆ ವಾಟರ್ ಪೈಪ್ ದುರಸ್ತಿ ನಡೆಯುವಾಗ ಕುಡಿಯುವ ನೀರಿನ ಎರಡು ಪೈಪ್ ಗಳು ಒಡೆದು ನಾಶವಾಗಿವೆ.

ಈ ಹಿನ್ನೆಲೆ ಕುಡಿಯುವ ನೀರು ಕಾರಂಜಿಯಂತೆ ಚಿಮ್ಮುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಆದರೆನಗರದ ಹುಡ್ಕೊ ಕಾಲೋನಿ, ತೇಜಾನಗರ, ರಾಧಾಕೃಷ್ಣ ನಗರ, ಮಲ್ಲಸಮುದ್ರಕ್ಕೆ ಸಂಪರ್ಕ ಕಲ್ಪಿಸುವ ಕುಡಿಯುವ ನೀರು ವ್ಯತ್ಯಯವಾಗಿದೆ. ಸಾಕಷ್ಟು ಪ್ರಮಾಣದ ನೀರು ಪೋಲಾಗ್ತಿದ್ರೂ ಈವರೆಗೂ ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ.ಇದರಿಂದಾಗಿ ಕುಡಿಯುವ ನೀರಿಗಾಗಿ ಸಾರ್ವಜನಿಕರು ಪರದಾಟ ನಡೆಸುವಂತಾಗಿದೆ.

Edited By : Nagesh Gaonkar
PublicNext

PublicNext

26/09/2022 11:36 am

Cinque Terre

30.02 K

Cinque Terre

0

ಸಂಬಂಧಿತ ಸುದ್ದಿ