ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: "ಮನೆ ಕೊಡಿ...ಇಲ್ಲವಾದ್ರೆ ಆತ್ಮಹತ್ಯೆ ಮಾಡಿಕೊಳ್ತೀವಿ"; ತಹಶೀಲ್ದಾರ್‌ ಗೆ ದಲಿತ ಕುಟುಂಬಗಳಿಂದ ಘೇರಾವ್

ಗದಗ: ಮನೆ ಕೊಡಿ... ಇಲ್ಲವಾದ್ರೆ ಆತ್ಮಹತ್ಯೆ ಮಾಡಿಕೊಳ್ತೀವಿ ಅಂತ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ತಹಸೀಲ್ದಾರ್‌ ಗೆ ದಲಿತ ಕುಟುಂಬಗಳಿಂದ ಘೇರಾವ್ ಹಾಕಿರೋ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶಿರನಹಳ್ಳಿ‌ ಗ್ರಾಮದಲ್ಲಿ ನಡೆದಿದೆ.

ಪ್ರತಿ ಮೂರನೇ ಶನಿವಾರದಂದು ಆಯಾ ಜಿಲ್ಲೆಯ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಗ್ರಾಮ ವಾಸ್ತವ್ಯ ಹಾಗೂ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಅನ್ನೋ ಕಾರ್ಯಕ್ರಮವನ್ನ ಕಂದಾಯ ಇಲಾಖೆ ಹಾಕಿಕೊಂಡಿದೆ. ಈ ಹಿನ್ನೆಲೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶೀರನಹಳ್ಳಿ ಗ್ರಾಮದಲ್ಲಿ ಮುಂಡರಗಿ ತಹಶೀಲ್ದಾರ್ ಶೃತಿ‌ ಮಳ್ಳಪ್ಪಗೌಡರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ತೆರಳಿದ್ದರು.‌

ಈ ವೇಳೆ‌ ಗಂಗಾಪುರ ಗ್ರಾಮದ ದಲಿತ ಕುಟುಂಬಗಳಿಂದ ತಹಶೀಲ್ದಾರ್‌ ಗೆ ಘೇರಾವ್ ಹಾಕಲಾಗಿದ್ದು, ಕಳೆದ ಹತ್ತಾರು ವರ್ಷಗಳಿಂದ ಗೋ ಶಾಲೆಗೆ ಬಳಸುವ ಶೆಡ್ ನಲ್ಲೆ ಬದುಕುತ್ತಿದ್ದೇವೆ. ಮನೆ ಕಟ್ಟಿ ಕೊಡಿ... ಇಲ್ಲವಾದ್ರೆ ಮನೆ ಕಟ್ಟಿಕೊಳ್ಳಲು ಅನುಮತಿ ಕೊಡಿ. ಹತ್ತಾರು ಬಾರಿ‌ ಮನವಿ ಮಾಡಿದರೂ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ದಲಿತ ಕುಟುಂಬದ‌ ಸದಸ್ಯರು ಆರೋಪ‌ ಮಾಡಿದ್ದಾರೆ.

Edited By : Shivu K
PublicNext

PublicNext

18/09/2022 03:34 pm

Cinque Terre

18.49 K

Cinque Terre

0

ಸಂಬಂಧಿತ ಸುದ್ದಿ