ಗದಗ: ನಿರಂತರ ಮಳೆಯಿಂದಾಗಿ ರೈತರು ನಲುಗಿ ಹೋಗಿದ್ದು ಇನ್ನೂ ಕೆಲ ರೈತರು ಬೆಳೆದ ಬೆಳೆಯೂ ಕೈಗೆ ಬಂದರು ಬಾಯಿಗೆ ಬಾರದ ಸ್ಥಿತಿಯಲ್ಲಿ ಇದ್ದಾರೆ.
ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ರೈತ ನಿಜಗುಣ ಶಿವಯೋಗಿ ಗಾಂಜಿ ಅವರು ತಮ್ಮ ಎರಡು ಎಕರೆ ಹೊಲದಲ್ಲಿ ಕ್ಯಾಬೀಜ್ ಬೆಳೆದಿದ್ದು ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕ್ಯಾಬೀಜ್ ಬೆಳೆಯೂ ಸಂಪೂರ್ಣ ಕೊಳೆತಿದೆ ಇದರಿಂದ ರೈತ ಕಂಗಾಲಾಗಿದ್ದಾನೆ.
ರೈತ ನಿಜಗುಣ ಗಾಂಜಿಯವರು ಎರಡು ಎಕರೆಯಲ್ಲಿ ಕ್ಯಾಬೀಜ್ ಬೆಳೆದಿದ್ದು ಅಂದಾಜು 70 ಸಾವಿರ ರೂಪಾಯಿ ಖರ್ಚು ಮಾಡಿದ್ದರು. ಈ ಬೆಳೆ ಮಳೆಯ ನೀರಿನಲ್ಲಿ ಸಿಲುಕಿಲ್ಲ ಅಂದರೆ ಸುಮಾರು 3 ಲಕ್ಷ.ರೂಪಾಯಿ ಲಾಭ ಬರುವ ನಿರೀಕ್ಷೆ ಇತ್ತು. ಆದರೆ ದೇವರು ಇವರ ಕೈ ಹಿಡಿಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗಿದೆ ರೈತನ ಬದುಕು.
ಹೋದ ವರ್ಷದಲ್ಲಿ ಇದೇ ಹೊಲದಲ್ಲಿ ಕ್ಯಾಬೀಜ್ ಬೆಳೆಯನ್ನು ಬೆಳೆದಿದ್ದು ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ ರೈತನಿಗೆ ಪೆಟ್ಟುಕೊಟ್ಟಿತ್ತು ಆದರೆ ಈ ವರ್ಷದಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಇದ್ದು ಪ್ರಯೋಜನ ಇಲ್ಲವಾಗಿದೆ. ಮಳೆಯ ನೀರು ಹೊಲದಲ್ಲಿ ನಿಂತು ತೇವಾಂಶ ಹೆಚ್ಚಾಗಿ ಸಂಪೂರ್ಣ ಕೊಳೆತು ಹೋಗಿದೆ ಎಂದು ರೈತ ನಿಜಗುಣ ಶಿವಯೋಗಿ ಗಾಂಜಿಯವರು ಬೇಸರ ವ್ಯಕ್ತಪಡಿಸಿದರು.
PublicNext
16/09/2022 07:23 pm