ಗದಗ: ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ NIA ಸಂಸ್ಥೆಯಿಂದ PFI ಮುಖಂಡರ ಮೇಲೆ ದಾಳಿ ನಡೆದಿದ್ದು, ಗದಗ ಜಿಲ್ಲೆಯಲ್ಲಿ ಮತ್ತೋರ್ವ ಪಿಎಫ್ಐ ಕಾರ್ಯಕರ್ತನ ಬಂಧನವಾಗಿದೆ. ಅದರಂತೆ ಗದಗ ಜಿಲ್ಲೆಯಲ್ಲಿ ಒಟ್ಟು 3 ಜನ PFI ಸಂಘಟಿಕರ ಬಂಧನವಾಗಿದೆ.
ಗದಗ ನಗರದ ಇಬ್ಬರು, ಬೆಟಗೇರಿಯ ಸನಾವುಲ್ ಶಲವಡಿ (34) ಎಂಬುವರ ಬಂಧನವಾಗಿದೆ. ಸನಾವುಲ್ ಖಾಸಗಿ ವಾಹನಗಳ ಚಾಲಕನಾಗಿ ಕೆಲಸ ಮಾಡ್ತಿದ್ದ. ಈತ ಎನ್.ಐ.ಎ. ದಾಳಿಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಈಗಾಗಲೇ ಬೆಳಿಗ್ಗೆ ಶಹರ ಠಾಣೆಯ ಪೊಲೀಸರು ಇಬ್ಬರನ್ನ ಬಂಧಿಸಿದ್ದರು. ಮತ್ತೋರ್ವ ಬೆಟಗೇರಿ ನಿವಾಸಿಯೋರ್ವನನ್ನ ಗದಗ ತಾಲೂಕ ದಂಡಾಧಿಕಾರಿ ಎದುರು ಬೆಟಗೇರಿ ಪೊಲೀಸರು ಹಾಜರು ಪಡಿಸಿದ್ದಾರೆ.
Kshetra Samachara
27/09/2022 05:15 pm