ಶಿರಹಟ್ಟಿ : ಮಂಗಳವಾರ ಅಂಗನವಾಡಿಯಲ್ಲಿ ಸಹಾಯಕ ಸಿಬ್ಬಂದಿ ಮಕ್ಕಳನ್ನು ಬಿಟ್ಟು ತಮ್ಮ ವೈಯಕ್ತಿಕ ಕೆಲಸದ ಮೇಲೆ ಹೋಗಿರುತ್ತಾರೆ. ಅಲ್ಲದೆ ಅಡುಗೆ ಕೋಣೆಯಲ್ಲಿ ಗ್ಯಾಸ್ ಆನ್ ಮಾಡಿ ಒಲೆ ಮೇಲೆ ಉಪ್ಪಿಟ್ಟು ಮಾಡಲು ಇಟ್ಟು, ಇನ್ನೊಂದು ಒಲೆ ಮೇಲೆ ತತ್ತಿ ಕುದಿಯಲು ಇಟ್ಟು ಹೋಗಿರುತ್ತಾರೆ.
ಸಹಾಯಕ ಸಿಬ್ಬಂದಿಯೂ ಮರಳಿ ಬಂದವರೇ ಅಂಗನವಾಡಿಯನ್ನು ಸಮಯ 11-30ಕ್ಕೆ ಮಕ್ಕಳನ್ನು ಮನೆಗೆ ಕಳುಹಿಸಿ ಕೀಲಿ ಹಾಕಿಕೊಂಡು ಹೊಗಿರುತ್ತಾರೆ. ಅಂದಹಾಗೆ ಈ ಅಂಗನವಾಡಿ ಇರುವುದು ಶಿರಹಟ್ಟಿ ನಗರದ ಕಚೇರಿ ಪ್ಲಾಟ್ ನಲ್ಲಿ ಇದೆ. ಮಕ್ಕಳು ಯಾಕೆ ಬೇಗ ಬಂದರು ಎಂದು ಪಾಲಕರು ಅಂಗನವಾಡಿಗೆ ಹೋದಾಗ ಕೀಲಿ ಹಾಕಿರುವುದನ್ನು ನೊಡಿ ಮೇಲಾಧಿಕಾರಿಗಳಿಗೆ ಹೇಳಿ ಎರಡು ದಿನಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಅಂಗನವಾಡಿಗೆ ಬಡವರು ಮಕ್ಕಳು ಶಾಲೆ ಕಲಿಯಲು ಬರುತ್ತಾರೆ. ಸರ್ಕಾರವು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡುವ ಸಲುವಾಗಿ ಕೋಟಿಗಟ್ಟಲೆ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದೆ. ಅಧಿಕಾರಿಗಳು ನಿರ್ಲಕ್ಷ್ಯದಿಂದಾಗಿ ಅದು ಮಕ್ಕಳಿಗೆ ಸರಿಯಾಗಿ ಸಿಗುತ್ತಿಲ್ಲ ಎಂದು ಸ್ಥಳೀಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಿನ್ನೆ ದಿನ ಗಾಂಧಿಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಕೂಡಾ ಇಲ್ಲಿ ಆಚರಿಸಿಲ್ಲಾ ಎನ್ನುವುದು ಗಮನಾರ್ಹ ವಿಷಯವಾಗಿದೆ. ಸಿಬ್ಬಂದಿ ವರ್ಗದವರು ಇಲ್ಲದ ಸಮಯದಲ್ಲಿ ಮಕ್ಕಳಿಗೆ ಏನಾದರೂ ತೊಂದರೆ ಆದರೆ ಯಾರು ಜವಾಬ್ದಾರರು ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವರಾ ಎಂದು ಕಾದು ನೋಡಬೇಕಿದೆ.
ವರದಿ: ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಶಿರಹಟ್ಟಿ
Kshetra Samachara
03/10/2024 02:56 pm