ನರಗುಂದ: ನರಗುಂದ ತಾಲ್ಲೂಕಿನ ಮುಗನೂರು ಗ್ರಾಮದಲ್ಲಿನ ಅಂಗನವಾಡಿ ಕೇಂದ್ರ ಪ್ರಾರಂಭವಾಗಲು ವಿಳಂಬವಾಗುತ್ತಿದೆ. ಕಟ್ಟಡ ಕಾಮಗಾರಿ ಮುಗಿದು ವರ್ಷ ಕಳೆದರೂ ಅಂಗನವಾಡಿ ಕೇಂದ್ರ ಗ್ರಾಮದಲ್ಲಿ ಪ್ರಾರಂಭವಾಗುತ್ತಿಲ್ಲ!
ಅಂಗನವಾಡಿ ಕೇಂದ್ರ ಸಂಖ್ಯೆ 121ರ ಅಂಗನವಾಡಿ ಈಗ ಖಾಸಗಿ ಕಟ್ಟಡದಲ್ಲಿ ತಿಂಗಳ ಬಾಡಿಗೆ ಮೂಲಕ ನಡೆಸಲಾಗುತ್ತಿದೆ. ಇದರಿಂದ ಸರಕಾರದ ಹಣ ವ್ಯಯವಾಗುತ್ತಿದ್ದು, ಸ್ವಂತ ಕಟ್ಟಡ ಇದ್ದರೂ ಸಹ ಪ್ರಾರಂಭ ಮಾಡದಿರುವುದು ವಿಪರ್ಯಾಸ.
ಬನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮುಗನೂರು ಗ್ರಾಮದ ಅಂಗನವಾಡಿ ಪರಿಸ್ಥಿತಿ ಇದಾಗಿದ್ದು, ಆದಷ್ಟು ಬೇಗ ಅಂಗನವಾಡಿ ಕೇಂದ್ರವನ್ನು ಪ್ರಾರಂಭ ಮಾಡಬೇಕು ಎಂದು ಕೆಆರ್ ಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ವೀರನಗೌಡ ಮುಗನೂರು ಆಗ್ರಹಿಸಿದ್ದಾರೆ.
PublicNext
04/10/2024 07:59 am